

ಪಾದಚಾರಿಗೆ ವಾಹನ ಡಿಕ್ಕಿ: ಮಹಿಳೆ ಗಂಭೀರ ಗಾಯ
ಚಿಕ್ಕೋಡಿ: ಪಿಕಾಪ್ ವಾಹನದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪಾದಚಾರಿ ಮಹಿಳೆಗೆ ವಾಹನ ಡಿಕ್ಕಿ ಹೊಡೆದು ಪರಿಣಾಮ ಮಹಿಳೆ ಗಂಬೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಿಪ್ಪಾಣಿ-ಮುದೋಳ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದೆ.
ಉಮರಾಣಿ ಗ್ರಾಮದ ನಿವಾಸಿ ಸರಿತಾ ಮಾರುತಿ ಮಗದುಮ್ಮ ಎಂಬ ಮಹಿಳೆಯೇ ಗಂಭೀರವಾಗಿ ಗಾಯಗೊಂಡಿದ್ದು,ಗಾಯಾಳು ಮಹಿಳೆಯನ್ನು ಚಿಕಿತ್ಸೆಗಾಗಿ ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕೋಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.