ಪಾದಚಾರಿ ಮಾರ್ಗದ ಅಂಗಡಿಗಳ ತೆರವಿಗೆ ಮನವಿ

Published on

ಹಾಸನ: ನಗರದ ಹೃದಯ ಭಾಗವಾಗಿರುವ ಎವಿಕೆ ಮಹಿಳಾ ಕಾಲೇಜು ರಸ್ತೆಯ ಪಾದಚಾರಿಗಳ ಜಾಗದಲ್ಲಿ ಇರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ದಲಿತ ಸಂಘಟನೆಗಳ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಕಾಲೇಜು ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿರುವುದರಲ್ಲದೆ, ನಿತ್ಯ ವಿದ್ಯಾರ್ಥಿನಿಯರು ಓಡಾಡುವ ರಸ್ತೆಯಾಗಿದೆ. ನಗರದ ಸರ್ಕಾರಿ ಆಸ್ಪತ್ರೆ ಹಾಗೂ ಎಸ್ಪಿ ಕಚೇರಿ, ಪಿಯು ಬೋರ್ಡ್‌ನ ಡಿಡಿಪಿಐ ಕಚೇರಿ ಸೇರಿದಂತೆ ಸಂಸದರ ನಿವಾಸಕ್ಕೂ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ನಗರಸಭೆ ವ್ಯಾಪ್ತಿಗೆ ಬರುವ ಈ ರಸ್ತೆಯಲ್ಲಿ ಅನಧಿಕೃವಾಗಿ ಕೆಲವರು ಫುಟ್‌ಪಾತ್ ಮೇಲೆ ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಓಡಾಡುವ ಜನರಿಗೆ ಮತ್ತು ವಾಹನಗಳಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡರಾದ ಚೌಡುವಳ್ಳಿ ಜಗದೀಶ್, ಎಚ್.ಟಿ.ಶ್ರೀನಿವಾಸ್, ಸತೀಶ್ ಕಬ್ಬಳ್ಳಿ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net