ಪಾತ್ರಾಭಿನಯ ಸುಳ್ಯ, ನೃತ್ಯದಲ್ಲಿ ಹಾವೇರಿ ಪ್ರಥಮ

Patrabhinaya
Published on

ಚಿತ್ರದುರ್ಗ: ಮುರುಘಾಮಠದಲ್ಲಿ ಎನ್‌ಸಿಇಆರ್‌ಟಿ, ಶಿಕ್ಷಣ ಇಲಾಖೆ, ಡಿಎಸ್‌ಇಆರ್‌ಟಿ, ಡಯಟ್‌ನಿಂದ ಎನ್‌ಪಿಇಪಿ ಕಾರ್ಯಕ್ರಮದಡಿ ಆಯೋಜಿಸಿದ್ದ ರಾಜ್ಯಮಟ್ಟದ ಪಾತ್ರಾಭಿನಯ, ಜಾನಪದ ನೃತ್ಯ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗ, ಹಾವೇರಿ ಜಿಲ್ಲೆಯ ಮಾರನಬೀಡ ಸರ್ಕಾರಿ ಪ್ರೌಢಶಾಲೆ ಕ್ರಮವಾಗಿ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿವೆ.

ಶಿರಸಿಯ ಶ್ರೀಮಾರಿಕಾಂಬ ಸರ್ಕಾರಿ ಪ್ರೌಢಶಾಲೆ, ಸುಳ್ಯದ ಆದರ್ಶ ಕೆಪಿಎಸ್ ಬೆಳ್ಳಾರೆ, ಚಾಮರಾಜನಗರ ಜಿಲ್ಲೆ ಮೆಲೆಹಳ್ಳಿ ಶಾಲೆ, ಚಿತ್ರದುರ್ಗ ಜಿಲ್ಲೆಯ ಎನ್.ಜಿ.ಹಳ್ಳಿ ಸರ್ಕಾರಿ ಪ್ರೌಢಶಾಲೆ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡಿವೆ. 34 ಶೈಕ್ಷಣಿಕ ಜಿಲ್ಲೆಗಳಿಂದ 374 ಸ್ಪರ್ಧಾಳು, 68 ಮೇಲ್ವಿಚಾರಕ ಶಿಕ್ಷಕರು ಪಾಲ್ಗೊಂಡಿದ್ದರು.

ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪ್ರಶಸ್ತಿ ನೀಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಮುಖ್ಯ. ಸೋಲು ಗೆಲುವಿನ ಮೆಟ್ಟಿಲಾಗಿದ್ದು, ಎರಡನ್ನ್ನೂ ಸಮನಾಗಿ ಸ್ವೀಕರಿಸಬೇಕು. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಆಶಿಸಿದರು.

ಬೆಂಗಳೂರು ವಿಭಾಗದ ಸಹ ನಿರ್ದೇಶಕ ಹಸನ್ ಮೊಯುದ್ದೀನ್, ಸಿಟಿಇ ಪ್ರವಾಚಕ ಹನುಮಂತರಾಯ, ಡಿವೈಪಿಸಿ ವೆಂಕಟೇಶಪ್ಪ, ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ, ಎನ್‌ಪಿಇಪಿ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಸವರಾಜು, ತೀರ್ಪುಗಾರರಾದ ರುದ್ರಮುನಿ, ಮಧು, ಕುಮಾರಪ್ಪ, ಡಾ.ನಂದಿನಿ ಶಿವಪ್ರಕಾಶ್, ಶ್ವೇತಾ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net