

ಮಂಗಳೂರು: ಬಂಟ್ವಾಳ ಪಾಣೆಮಂಗಳೂರು ಬಳಿಯ ಬೊಂಡಾಲ ಶಾಂತಿಗುಡ್ಡೆಯಲ್ಲಿ ಅನೈತಿಕ ಸಂಬಂಧ ಶಂಕೆಯಿಂದ ಅಣ್ಣನೇ ತಮ್ಮನ ತಲೆಗೆ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಸುಂದರ ಕೊಲೆಯಾದವನು. ರವಿ ಆರೋಪಿ. ಮೂಲ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಅವಿವಾಹಿತ ಸುಂದರನಿಗೆ ರವಿಯ ಪತ್ನಿ ಊಟ ನೀಡುತ್ತಿದ್ದರು. ಇವರ ನಡುವೆ ಅನೈತಿಕ ಸಂಬಂಧ ಇದೆ ಎಂಬ ಶಂಕೆಯಿಂದ ಶುಕ್ರವಾರ ರಾತ್ರಿ ಅಡಕೆ ಅಲಾಕೆಯಿಂದ ರವಿ ಹೊಡೆದು ಕೊಲೆ ಮಾಡಿದ್ದಾನೆ. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.