ಪಾಟ್ನಾದ ಬೌದ್ಧ ರ‌್ಯಾಲಿಗೆ ಬೆಂಬಲ

ctd----0002
Published on

ಚಿತ್ರದುರ್ಗ: ಪಾಟ್ನಾ ಬುದ್ಧ ಗಯಾದ ಆಡಳಿತ ಕಾಯ್ದೆ ಬಿಟಿ-1949 ನ್ನು ರದ್ದುಪಡಿಸಿ, ಆಡಳಿತವನ್ನು ಬೌದ್ಧರಿಗೆ ನೀಡುವಂತೆ ಒತ್ತಾಯಿಸಿ ಸೆ.17 ರಂದು ನಡೆಯಲಿರುವ ಬೌದ್ಧರ ಶಾಂತಿ ಯಾತ್ರೆಯನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ಬಿಎಸ್‌ಐ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇ ಸ್ವಾಮಿ ಹೇಳಿದರು.
ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ಪಾಟ್ನಾ ರ‌್ಯಾಲಿ ಕುರಿತ ನಡೆದ ಬಿಎಸ್‌ಐ ಜಿಲ್ಲಾಸಭೆಯಲ್ಲಿ ಮಾತನಾಡಿದ ಅವರು, ಪ್ರಮುಖ ಬೇಡಿಕೆಗಳು ಬುದ್ಧ ಗಯಾದ ಮಹಾಬೋಧಿ ವಿಹಾರ ಮಂದಿರ ಅಧಿನಿಯಮವನ್ನು ಕೂಡಲೇ ರದ್ದು ಮಾಡಬೇಕು. ಮಹಾಬೋಧಿ ವಿಹಾರ ಮಂದಿರಕ್ಕೆ ಶೇ.100 ಬೌದ್ಧರ ಸ್ವಾಯುತ್ತ ಆಡಳಿತ ಮಂಡಳಿ ಬೇಕು.
ಬೌದ್ಧರ ಸಾಯುತ್ತತೆ ರಕ್ಷಿಸಲು ಅಂತಾರಾಷ್ಟ್ರೀೀಯ ಒತ್ತಡದ ಅನಿವಾರ್ಯತೆಯಿದ್ದು ಯುನೆಸ್ಕೋ ಮಧ್ಯಪ್ರವೇಶಿಸಬೇಕಿದೆ. ಬೌದ್ಧ ಕ್ಷೇತ್ರದ ಮೇಲಿರುವ ಹಿಂದುಗಳ ನಿಯಂತ್ರಣ ಸಮಾಪ್ತಿ ಮಾಡಿ ಬೌದ್ಧರಿಗೆ ಮಹಾ ವಿಹಾರದ ಆಡಳಿತ ವಹಿಸಲು ಹಮ್ಮಿಕೊಂಡ ಈ ಪಾಟ್ನಾ ರ‌್ಯಾಲಿಗೆ ಜಿಲ್ಲೆಯಿಂದ 50 ಜನರು ಭಾಗವಹಿಸಲಿದ್ದಾರೆ.
ಆಸಕ್ತರು ಬಿ.ಪಿ.ತಿಪ್ಪೇಸ್ವಾಮಿ(9900592473)ಹಾಗೂ ನನ್ನಿವಾಳ ರವಿ ಕುಮಾರ್(8088277979)ಅವರನ್ನು ಸಂಪರ್ಕಿಸಬಹುದೆಂದರು.
ಹನುಮಂತಪ್ಪ,ಇ.ನಾಗೇಂದ್ರಪ್ಪ,ರವಿಕುಮಾರ್,ಶಿಕ್ಷಕಿ ಗಿರಿಜಾ, ಶಂಕುತಲಾ,ಸಾಕಮ್ಮ,ತುರುವನೂರು ಜಗನ್ನಾಥ,ಬನ್ನಿಕೋಡ್ ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net