ಪಾಟೀಲ ಸಮಾಜಮುಖಿ ಕಾರ್ಯ ಮಾದರಿ

3Athni1
Published on

ಅಥಣಿ: ಎಲ್ಲರ ಒಳತಿಗಾಗಿ ಶ್ರಮಿಸಿದ ಬಿ.ಎಲ್.ಪಾಟೀಲ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಇಳಕಲ್ಲದ ಗುರುಮಹಾಂತ ಸ್ವಾಮೀಜಿ ಹೇಳಿದರು.

ತಾಲೂಕಿನ ಮಲಾಬಾದ ಗ್ರಾಮದ ವಿಮೋಚನಾ ವಸತಿ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೋನಮ್ಮತಾಯಿ ಪ್ರತಿಮೆ ಅನಾವರಣ ಹಾಗೂ ಸಂಕಲ್ಪ ಜ್ಯೋತಿ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜಯಪುರ ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಮಾತೆ ವಾಗ್ದೇವಿಯ ಕುಮಾದೇವಿ, ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್.ಪಾಟೀಲ, ಶಾಸಕ ರಾಜು ಕಾಗೆ ಮಾತನಾಡಿದರು.

ಸಿದ್ದೇಶ್ವರ ಸ್ವಾಮೀಜಿ ಕುರಿತು ಬಿಜ್ಜರಗಿಯ ಸೋಮನಿಂಗ ಬಿರಾದಾರ ರಚಿಸಿದ ಸಂಕಲ್ಪ ಜ್ಯೋತಿ ಗ್ರಂಥ ಬಿಡುಗಡೆಗೊಳಿಸಲಾಯಿತು.

ಜನವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ಜಿ.ಎ.ತಿಗಡಿ, ಬಿ.ಆರ್. ಪೊಲೀಸ್‌ಪಾಟೀಲ, ಶಾರದಾದೇವಿ ಪಾಟೀಲ, ಶಶಿಕಲಾ ದೇಶಮುಖ, ಬಾಳಾಸಾಹೇಬ ಲೊಕಾಪುರ, ಎ.ಎಸ್. ಬೇರಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net