

ಕಬ್ಬೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ತಕ್ಕ ಪಾಠ ಕಲಿಸಿದೆ ಎಂದು ಹುಕ್ಕೇರಿಯ ಕ್ಯಾರಗುಡ್ಡ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.
ಸಮೀಪದ ಜಾಗನೂರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಆಪರೇಷನ್ ಸಿಂಧೂರ ಅಂತಿಮ ಜಯ ನಮ್ಮದೇ' ಹೆಸರಿನಲ್ಲಿ ವೀರಯೋಧರಿಗೆ ಗೌರವ ನಮನ ಹಾಗೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಾರ್ಗಿಲ್ ವಿಜಯೋತ್ಸವದಲ್ಲಿ ಭಾಗವಹಿಸಿದ್ದ ಗ್ರಾಮದ ಮಾಜಿ ಸೈನಿಕ ಹನುಮಂತ ಕರಿಕಟ್ಟಿ ಯುದ್ಧದ ಅನುಭವ ಹಂಚಿಕೊಂಡರು. ಶ್ರೇಯಾ ಹಣಜಾನಟ್ಟಿ ದೇಶಭಕ್ತಿ ಗೀತೆ ಹಾಡಿದರು. ಮುಖ್ಯ ವೇದಿಕೆಯಿಂದ ಹನುಮಾನ ದೇವಸ್ಥಾನದ ಮುಖ್ಯದ್ವಾರದವರೆಗೆ ಮೋಂಬತ್ತಿ ಬೆಳಗುತ್ತ ಯಾತ್ರೆ ನಡೆಸಲಾಯಿತು. ಮಾಜಿ ಸೈನಿಕರಾದ ಪರಸಪ್ಪ ಹಣಜಾನಟ್ಟಿ, ಕೆಂಚಪ್ಪ ತಿಗಡಿ, ಶಂಕರ ಹಣಜಾನಟ್ಟಿ, ಮಹಾದೇವ ಚಿಂಚಲಿ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಮಂಗಿ, ಉಪಾಧ್ಯಕ್ಷ ಮಲ್ಲೇಶ ಹನುಮಂತಗೋಳ, ಮಹೇಂದ್ರ ಖೆಮಲಾಪುರೆ, ಶಿವಾನಂದ ರ‍್ಯಾಯಿ, ಮಾಳಪ್ಪ ಗೊರಗುದ್ದಿ, ಸಿದ್ದು ಖಿಂಡಿ, ಪಿಕೆಪಿಎಸ್ ಅಧ್ಯಕ್ಷ ಹನುಮಂತ ಕರಿಕಟ್ಟಿ, ಉಪಾಧ್ಯಕ್ಷ ಮುತ್ಯಪ್ಪ ಹಣಮಣ್ಣವರ, ಲಕ್ಷ್ಮಣ ಹಣಮಣ್ಣವರ, ಮಾರುತಿ ಹಮಾರ, ಎನ್.ಬಿ. ತೇರದಾಳೆ, ರಾಮಪ್ಪ ಗಿಡ್ಡಪಗೋಳ, ಮುತ್ಯಪ್ಪ ಮರಾಠ ಇತರರಿದ್ದರು.