

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದಂತೆ ಪಾಕ್ ಪ್ರಜೆಗಳನ್ನು ಕೂಡಲೇ ಹೊರ ಹಾಕಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಜಿ¯್ಲÁಧಿಕಾರಿ ಕಚೇರಿ ಎದುರು ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೆಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯ ನಂತರ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು ಕೂಡಲೇ ದೇಶ ಬಿಟ್ಟು ತೆರಳಬೇಕು ಎಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಈ ಆದೇಶ ರಾಜ್ಯ ಸರ್ಕಾರ ಕಡ್ಡಾಯವಾಗಿ ಜಾರಿಗೆ ತರುವ ಮೂಲಕ ಪಾಕ್ ಪ್ರಜೆಗಳನ್ನು ಹೊರ ಹಾಕಬೇಕು ಎಂದು ಒತ್ತಾಯಿಸಿದರು.
ಏ.೨೨ರಂದು ಅಮಾಯಕ ಭಾರತೀಯರನ್ನು ಉಗ್ರರು ಗುಂಡಿಟ್ಟು ಕೊಂದಿದ್ದು, ಇಂತಹ ಪೈಶಾಚಿಕ ಕೃತ್ಯಕ್ಕೆ ಕೈಜೋಡಿಸುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕಾದರೆ ಕೂಡಲೇ ದೇಶದಲ್ಲಿರುವ ಹಾಗೂ ರಾಜ್ಯದಲ್ಲಿರುವ ಪಾಕ್ ಪ್ರಜೆಗಳನ್ನು ಹೊರ ದಬ್ಬಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಲೆಮಾರಿ ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯP್ಷÀ ದೇವೀಂದ್ರನಾಥ ನಾದ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದ ಹಿಂದು ಕಾರ್ಯಕರ್ತರ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಮಂಗಳೂರಿನ ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬAಧಿಸಿದAತೆ ಈವರೆಗೆ ಕೊಲೆಗಡುಕರನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದೆಲ್ಲವನ್ನು ಗಮನಿಸಿದರೆ ನಾವು ಪಾಕಿಸ್ತಾನದಲ್ಲಿz್ದೆÃವೋ ಅಥವಾ ಹಿಂದು ರಾಷ್ಟçದಲ್ಲಿz್ದÉÃವೋ ಎಂಬುದು ಅರ್ಥವಾಗುತ್ತಿಲ್ಲ ಎಂದು ಗದರಿದರು.
ಜಿ¯್ಲÁ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಮಾತನಾಡಿದರು. ಮಾಜಿ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರು, ಜಿ¯್ಲÁ ಉಪಾಧ್ಯP್ಷÀ ಬಸವರಾಜ ಸೊನ್ನದ, ಜಿ¯್ಲÁ ವಕ್ತಾರ ಹಣಮಂತ ಇಟಗಿ, ಜಿ¯್ಲÁ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೇರಿ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೆರಿ, ಪ್ರಭಾವತಿ ಕಲಾಲï, ಎಂ.ಕೆ.ಬಿರುನೂರ, ಗ್ರಾಮೀಣ ಮಂಡಲ ಅಧ್ಯP್ಷÀ ರಾಜಶೇಖರ ಕಾಡಂನೊರ, ನಗರ ಮಂಡಲ ಅಧ್ಯP್ಷÀ ಲಿಂಗಪ್ಪ ಹತ್ತಿಮನಿ, ಯುವ ಮೋರ್ಚಾ ಜಿ¯್ಲÁಧ್ಯP್ಷÀ ಶ್ರೀಧರ ಆರ್. ಸಾಹುಕಾರ, ಮಹಿಳಾ ಮೋರ್ಚಾ ಜಿ¯್ಲÁಧ್ಯಕ್ಷೆ ಸುನಿತಾ ಚವ್ಹಾಣ್, ಎಸ್‌ಟಿ ಮೋರ್ಚಾ ಜಿ¯್ಲÁಧ್ಯP್ಷÀ ಚಂದಪ್ಪ ರಾಮಸಮುದ್ರ, ಮೊನೇಶ ಬೆಳಿಗೇರಿ, ಬಸವರಾಜಗೌಡ ಬಿಳಾರ, ಬಸಣಗೌಡ ಕನ್ಯಕೋಳೂರ, ರಾಜೇಶ ಜೈನ್, ಮಲ್ಲಿಕಾರ್ಜುನ ಕಟ್ಟಿಮನಿ, ಗೋಪಾಲ ದಾಸನಕೆರಿ, ಶಕುಂತಲಾ, ಭೀಮಬಾಯಿ ಶೆಂಡಿಗಿ, ಚನ್ನವೀರಯ್ಯ ಸ್ವಾಮಿ, ಮಂಜುನಾಥ ಗುತ್ತಿಗೆದಾರ, ಮಲ್ಲು ಕೊಲಿವಾಡ, ಜಿ¯್ಲÁ ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ ಕಡೆಸೂರ,ನಾಗರಡ್ಡಿ ಇಬ್ರಾಹಿಂಪುರ ಇತರರಿದ್ದರು.