ಪಾಕ್ ಪರ ಘೋಷಣೆ ಕೂಗಿಲ್ಲ

CTD ---00005
Published on

ಚಿತ್ರದುರ್ಗ: ವಿಧಾನಸೌಧದಲ್ಲಿ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್‌ಹುಸೇನ್ ಅವರ ಪರ ಕೂಗಿದ ಘೋಷಣೆಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಅವರು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಸಭೆ ಚುನಾವಣೆಯಲ್ಲಿ ಸೈಯದ್ ಅವರ ಗೆಲುವಿನ ಖುಷಿಯಲ್ಲಿ ಅವರ ಪರ ಬೆಂಬಲಿಗರು, ಕಾಂಗ್ರೆಸ್ ಕಾರ‌್ಯಕರ್ತರು ಜೈಕಾರ ಹಾಕಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಬಿಜೆಪಿ ಕಾ ರ‌್ಯಕರ್ತರು ನಗರದಲ್ಲಿ ಬುಧವಾರ ನಮ್ಮ ಪಕ್ಷದ ಕಚೇರಿಗೆ ಮುತ್ತಿಗೆ ಹಾಕಲು ನಡೆಸಿದ ಪ್ರಯತ್ನ ಖಂಡನೀಯ ಎಂದರು.
ಸೈಯದ್ ಅವರು ಮೂಲ ಚಿತ್ರದುರ್ಗ ತಾಲೂಕು ತುರುವನೂರು ಸ್ವಾತಂತ್ರೃ ಹೋರಾಟಗಾರರ ಕುಟುಂಬವರು. ದೇಶದ್ರೋಹದ ಘೋಷಣೆಗಳಿಗೆ ಅವರು ಆಸ್ಪದ ಕೊಡುವವರಲ್ಲ. ಅವರ ಬಗ್ಗೆ ಮಾಡುತ್ತಿರುವ ಅಪಪ್ರಚಾರ ನಿಲ್ಲಿಸದಿದ್ದರೆ ಬಿಜೆಪಿ ವಿರುದ್ಧ ಪ್ರತಿಭ ಟಿಸಬೇಕಾಗುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಮುದಸಿರ್ ನವಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net