ಪಾಂಡಿತ್ಯ ಯೂರೋ ಶಾಲೆಯಲ್ಲಿ ಪರಿಸರ ದಿನಾಚರಣೆ

ಪಾಂಡಿತ್ಯ ಯೂರೋ ಶಾಲೆಯಲ್ಲಿ ಪರಿಸರ ದಿನಾಚರಣೆ
Published on

ಹಾಸನ: ಬೇಲೂರು ರಸ್ತೆಯಲ್ಲಿರುವ ನಗರದ ಬಸವೇಶ್ವರ ನಗದ ಐಸಿಎಸ್‌ಇ ಪಠ್ಯಕ್ರಮ ಆಧಾರಿತ ಶಾಲೆಯಾದ ಪಾಂಡಿತ್ಯ ಯೂರೋ ಶಾಲೆಯಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಗರ್ಭಿತವಾಗಿ ಆಚರಿಸಲಾಯಿತು. ಉತ್ತಮ ಪರಿಸರದ ನಿರ್ಮಾಣ ಮಾಡುವ ಸಲುವಾಗಿ ಶಾಲೆಯ ಮಕ್ಕಳು ವಿವಿಧ ರೀತಿಯಾದ ಗಿಡಗಳನ್ನು ತಂದು, ಶಾಲೆಯ ಆಚರಣದಲ್ಲಿ ಗಿಡ ನೆಟ್ಟು, ಶಾಲೆಯ ಆವರಣವನ್ನು ಶುಚಿಗೊಳಿಸುವುದರ ಮೂಲಕ ಶ್ರಮದಾನ ಮಾಡಿದರು.
ಶಾಲೆಯ ಪ್ರಾಂಶುಪಾಲರಾದ ಬ್ರಹ್ಮಾನಂದ ಮೂರ್ತಿ ಅವರು ಮಾತನಾಡಿ, ಪ್ರತಿನಿತ್ಯದ ಜೀವನದಲ್ಲಿ ಪರಿಸರವನ್ನು ಉಳಿಸಿ ಬೆಳೆಸುವುದರಲ್ಲಿ ನಮ್ಮಗಳ ಪಾತ್ರ ಹಾಗೂ ಅದರಿಂದ ನಮಗಾಗುವ ಅನುಕೂಲಗಳ ಕುರಿತು ಮಕ್ಕಳಿಗೆ ಅರ್ಥಗರ್ಭಿತವಾದ ತಿಳಿಸಿಕೊಟ್ಟರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಕ್ಕಳ ತಜ್ಞರು ಹಾಗೂ ಶಿಶು ವೈದ್ಯಕೀಯ ಸಂಘ ಹಾಸನ ಶಾಖೆಯ ಅಧ್ಯಕ್ಷರಾದ ಡಾ. ಎಚ್.ಕೆ. ಪಾಲಾಕ್ಷ ಮತ್ತು ಮಕ್ಕಳ ತಜ್ಞರು ಹಾಗೂ ಶಿಶು ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಬಿ.ಕೆ. ವಿದ್ಯಾಲಕ್ಷ್ಮೀ ಆಗಮಿಸಿ ಮಕ್ಕಳಿಗೆ ಪರಿಸರ, ಪರಿಸರದ ಪ್ರಾಮುಖ್ಯತೆ, ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರವೇನು ಎಂಬುದರ ಕುರಿತು ಹಿತವಚನ
ನಂತರ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರು ಪ್ರತಿನಿತ್ಯದ ಜೀವನದಲ್ಲಿ ಪರಿಸರವನ್ನು ಉಳಿಸಿ ಬೆಳೆಸುವುದರಲ್ಲಿ ನಮ್ಮಗಳ ಪಾತ್ರ ಹಾಗೂ ಅದರಿಂದ ನಮಗಾಗುವ ಅನುಕೂಲಗಳನ್ನು ಕುರಿತು ಮಕ್ಕಳಿಗೆ ಅರ್ಥಗರ್ಭಿತವಾದ ತಿಳಿಸಿಕೊಟ್ಟರು.
ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಟಿ.ಡಿ. ಸೆಬಾಸ್ಟಿಯನ್, ಹಾಗೂ ಶಿಕ್ಷಣ ಸಂಯೋಜಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net