ಪಾಂಡಿತ್ಯ ಪಡೆಯಲು ಬೇರೆ ಭಾಷೆ ಕಲಿಯಿರಿ

0
Published on

ಮಧುಗಿರಿ: ಮಾತೃಭಾಷೆ ಕನ್ನಡಕ್ಕೆ ಆದ್ಯತೆ ನೀಡುವುದರ ಜತೆಗೆ ಪಾಂಡಿತ್ಯ ಪಡೆಯಲು ಬೇರೆ ಭಾಷೆಗಳನ್ನು ಕಲಿಯುವುದು ಅವಶ್ಯಕ ಎಂದು ಸಹಕಾರ ಸಚಿವ ಕೆ.ಎನ್​.ರಾಜಣ್ಣ ತಿಳಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯುನಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ.100ರಷ್ಟು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಡುವ ಕೆಲಸ ಆಗಬೇಕು. ಮಧುಗಿರಿ ೇತ್ರದಲ್ಲಿ ಶಿಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳ ಶಿಣಕ್ಕಾಗಿ ಶಾಲಾ ಕೊಠಡಿಗಳನ್ನು ಮಧುಗಿರಯಲ್ಲಿ ನಿರ್ಮಿಸಿದಷ್ಟು ಬೇರೆ ಎಲ್ಲೂ ನಿರ್ಮಿಸಿಲ್ಲ. ಮಕ್ಕಳಿಗೆ ಶಿಣ ನೀಡಲು ಸರ್ಕಾರ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಮಕ್ಕಳು ಯಾವುದೇ ಕಾರಣಕ್ಕೂ ಶಾಲೆಗೆ ಗೈರಾಗದೆ ನಿರಂತರ ಹಾಜುರಾದರೆ ಪ್ರತಿಭಾವಂತರಾಗಲು ಸಾಧ್ಯವಾಗುತ್ತದೆ. ಮಕ್ಕಳು ವಿದ್ಯಾವಂತರಾದಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ಮಕ್ಕಳಿಗೆ ಉದ್ಯೋಗ ದೊರೆಯುವಂತಾಗಲು ಜಿಟಿಟಿಸಿ ಕಾಲೇಜು ಪ್ರಾರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳು ಶಿಕರಿಗೆ ಗೌರವ ನೀಡಿ ಸದಾ ಕಾಲ ಸ್ಮರಿಸುವಂತೆ ಆಗಬೇಕು. ಮಧುಗಿರಿಯಲ್ಲಿ ನಿರ್ಮಿಸಲಾಗಿರುವ ಕನ್ನಡ ಭವನ ಕನ್ನಡದ ಆಸ್ತಿ. ಅತೀ ಶ್ರೀದಲ್ಲೆ ಮಧುಗಿರಿಯಲ್ಲಿ ವಿಭಿನ್ನವಾಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುವುದು ಎಂದರು.

ಕಸಾಪ ಜಿಲ್ಲಾಧ್ಯ ಸಿದ್ದಲಿಂಗಪ್ಪ ಮಾತನಾಡಿ, ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕು. ಇತರ ಭಾಷೆಗಳು ಅನಿವಾರ್ಯತೆಯಿಂದಾಗಿ ಸಾಂದರ್ಭಿಕವಾಗಿ ಬಳಸಬೇಕು. ಮಕ್ಕಳು ಮಮ್ಮಿ ಡ್ಯಾಡಿ ಯಂತಹ ಪದಗಳ ಬಳಕೆ ಕಡಿಮೆ ಮಾಡಬೇಕು. ಶಾಲೆಗಳಲ್ಲಿ ತ್ರಿಬಾಷಾ ಸೂತ್ರವಿದೆ. ಕನ್ನಡ ಭಾಷೆ ಇರುವುದು ನಮ್ಮ ಸೌಲಭ್ಯಕ್ಕಾಗಿ, ಕನ್ನಡ ಜೀವನದ ಮೌಲ್ಯಗಳ ಪಾಠವಾಗಬೇಕು. ಕನ್ನಡಕ್ಕೆ ಆದ್ಯತೆ ಕೊಡಬೇಕು. ಕನ್ನಡವನ್ನು ಪ್ರೀತಿಸಿ ಬಳಸಬೇಕಾಗಿದೆ ಎಂದರು.

ಪುರಸಭೆ ಸದಸ್ಯೆ ಗಾಯತ್ರಿ ಉಮೇಶ್​, ಹಿರಿಯ ಸಾಹಿತಿ ಮ ಲ ನ ಮೂರ್ತಿ, ಕಸಾಪ ಅಧ್ಯೆ ಸಹನಾ ನಾಗೇಶ್​, ಕಾರ್ಯದರ್ಶಿ ರಂಗಧಾಮಯ್ಯ, ಎನ್​.ಮಹಲಿಂಗೇಶ್​, ಎಂ.ಎಸ್​.ಶಂಕರ್​ ನಾರಾಯಣ, ಪ್ರೊ.ಮುನೇಂದ್ರ ಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net