ಪಾಂಡವಪುರದಲ್ಲಿ ಅಪರೂಪ ಚಿತ್ರದ ಪ್ರಚಾರ

11-pnp 3
ಪಾಂಡವಪುರ ಪಟ್ಟಣದಲ್ಲಿ ಕಸಾಪ ಭವನದಲ್ಲಿ ಆಯೋಜಿಸಿದ್ದ ಅಪರೂಪ ಚಿತ್ರ ಪ್ರಮೋಷನ್ ಕಾರ್ಯಕ್ರಮದಲ್ಲಿ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಚಿತ್ರ ತಂಡಕ್ಕೆ ಶುಭಾಶಯ ಕೋರಿದರು.
Published on

ಪಾಂಡವಪುರ: ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಹೊಸ ಪ್ರತಿಭೆಗಳಾದ ಸುಘೋಷ್ ಮತ್ತು ಋತಿಕಾ ಅಭಿನಯದ ಅಪರೂಪ ಚಿತ್ರ ತಂಡದಿಂದ ಪ್ರಮೋಷನ್ ಕಾರ್ಯಕ್ರಮ ಮಂಗಳವಾರ ನಡೆಯಿತು.
ಶ್ರೀರಂಗಪಟ್ಟಣ ತಾಲೂಕು ಎಂ.ಶೆಟ್ಟಹಳ್ಳಿ ಗ್ರಾಮದ ಯುವಪ್ರತಿಭೆ ಸುಘೋಷ್ ನಾಯಕ ನಟನಾಗಿ ಅಭಿನಯಿಸಿರುವ ಅಪರೂಪ ಚಿತ್ರವನ್ನು ಮಹೇಶ್ ನಿರ್ದೇಶಿಸಿದ್ದಾರೆ. ನಾಯಕಿಯಾಗಿ ಋತಿಕಾ ಅಭಿನಯಿಸಿದ್ದು, ಚಿತ್ರ ಜು.14 ರಂದು ತೆರೆಗೆ ಬರಲಿದೆ.
ಕಾರ್ಯಕ್ರಮದಲ್ಲಿ ನಾಯಕ ಸುಘೋಷ್ ಮಾತನಾಡಿ, ಸಿನಿಮಾದ ಟ್ರೈಲರ್ ನೋಡಿದರೆ ಸಿನಿಮಾ ನೋಡಬೇಕೆಂಬ ಹಂಬಲ ಹೆಚ್ಚುತ್ತದೆ. ಮಂಡ್ಯ ಜಿಲ್ಲೆ ನನಗೆ ತವರು ಮನೆಯಾಗಿದೆ. ತವರು ಮನೆಯ ಜನ ಹೆಚ್ಚು ಸಹಕಾರ ನೀಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಕನ್ನಡ ಸಿನಿಮಾ ರಂಗದಲ್ಲಿ ಹಿರಿಯ ನಟರ ಮಕ್ಕಳು ನಟನೆಯಲ್ಲಿ ಅದ್ಭುತ ಸಾಧನೆ ಮಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೊಸಬರಿಗೆ ನಿರ್ದೇಶನ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಸಾಮಾನ್ಯ ಕುಟುಂಬದಿಂದ ಬಂದಿರುವ ಪ್ರತಿಭೆಗಳನ್ನು ಅಪರೂಪ ಚಿತ್ರದ ಮೂಲಕ ಪರಿಚಯಿಸಿರುವ ಕೀರ್ತಿ ನಿರ್ದೇಶಕ ಮಹೇಶ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ಉಷಾ, ನಿರ್ದೇಶಕ ಬೋರೇಗೌಡ, ಸಾಹಿತಿ ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net