ಪಾಂಡಪ್ಪ ಅಧ್ಯಕ್ಷ, ಮಹಾಂತೇಶ ಉಪಾಧ್ಯಕ್ಷ

Pandappa President Mahanthesha Vice President
New Project
ಬೈಲಹೊಂಗಲ ಪಿಕೆಪಿಎಸ್ ನಂ.1ರ ಆಡಳಿತ ಮಂಡಳಿಗೆ ಆಯ್ಕೆಯಾದ ಅಧ್ಯಕ್ಷ ಪಾಂಡಪ್ಪ ಇಂಚಲ, ಉಪಾಧ್ಯಕ್ಷ ಮಹಾಂತೇಶ ಹೊಸಮನಿ ಅವರನ್ನು ಸಹಕಾರಿ ವತಿಯಿಂದ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಬೋಳನ್ನವರ, ಬಸವರಾಜ ಮೂಗಿ, ಶಿವಪ್ಪ ಮತ್ತಿಕೊಪ್ಪ, ಮಹಾಂತೇಶ ತುರಮರಿ, ಈಶ್ವರ ಮೂಗಿ ಇತರರಿದ್ದರು.
Published on

ಬೈಲಹೊಂಗಲ: ಪಟ್ಟಣದ ನಂ.1 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ಎಲ್ಎಸ್‌ಎಂಪಿ)ದ ಆಡಳಿತ ಮಂಡಳಿಗೆ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಪಾಂಡಪ್ಪ ದೇಮಪ್ಪ ಇಂಚಲ, ಉಪಾಧ್ಯಕ್ಷರಾಗಿ ಮಹಾಂತೇಶ ಸುರೇಶ ಹೊಸಮನಿ ಅವಿರೋಧವಾಗಿ ಆಯ್ಕೆಯಾದರು.
ಹಿರಿಯರ ಸಮ್ಮತಿಯಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣೆ ಅಕಾರಿ ಸಂತೋಷ ಹಡಪದ ಅವರು ಅವಿರೋಧ ಆಯ್ಕೆ ಘೋಷಿಸಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರು ಮಾತನಾಡಿ, ಹಿರಿಯರ ಹಾಗೂ ಆಡಳಿತ ಮಂಡಳಿಯ ಸಲಹೆ ಸೂಚನೆಗಳೊಂದಿಗೆ ರೈತರ ಹಿತದೃಷ್ಟಿಯಿಂದ ಸಂಘವನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.
ಹಿರಿಯರಾದ ಮಲ್ಲಿಕಾರ್ಜುನ ಬೋಳನ್ನವರ, ಮರ್ಚಂಟ್ಸ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಮೂಗಿ, ಶಿವಪ್ಪ ಮತ್ತಿಕೊಪ್ಪ, ಮಹಾಂತೇಶ ತುರಮರಿ, ಈಶ್ವರ ಮೂಗಿ ಸಮ್ಮುಖದಲ್ಲಿ ನೇಮಕ ಪ್ರಕ್ರಿಯೆ ಜರುಗಿತು.
ಶಂಕ್ರಪ್ಪ ತುರಮರಿ, ಮಹಾಂತೇಶ ಹರಕುಣಿ, ವಿರೂಪಾಕ್ಷ ವಾಲಿ, ಬಸಲಿಂಗಯ್ಯ ಹಿರೇಮಠ, ಉಳುವಪ್ಪ ಶೆಟಗಾರ, ಬಸಪ್ಪ ಬೆಳಗಾವಿ, ಶೇಖರ ತುರಮರಿ, ಸುಭಾಷ ತುರಮರಿ, ಶ್ರೀಕಾಂತ ಮತ್ತಿಕೊಪ್ಪ, ಶ್ರೀಶೈಲ ಗೀರನವರ, ಅರುಣ ತುರಮರಿ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಉಳವಪ್ಪ ಬಡ್ಡಿಮನಿ, ಬಸವರಾಜ ಕಲಾದಗಿ, ಮಹಾಬಳೇಶ್ವರ ಬೋಳನ್ನವರ, ಕುಮಾರಗೌಡ ಪಾಟೀಲ, ಆನಂದ ಮೂಗಿ, ಪ್ರವೀಣ ಮೂಗಿ, ಸುಜಾತಾ ಮಹಾಂತೇಶ ಹರಕುಣಿ, ಗೀತಾ ಬಸವರಾಜ ತುರಮರಿ, ಬಸವರಾಜ ಬೆಟಗೇರಿ, ರಮೇಶ ಹುಲೆನ್ನವರ, ಸಂಘದ ವ್ಯವಸ್ಥಾಪಕ ಬಸವರಾಜ ವಾಲಿ, ಮಾಜಿ ವ್ಯವಸ್ಥಾಪಕ ಸೋಮಪ್ಪ ವಾಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net