ಪಹಣಿಯಲ್ಲಿ ವಕ್ಫ್ ಹೆಸರು ಹಿಂದಕ್ಕೆ

9Brg1
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (200, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಬೋರಗಾಂವ: ಪಟ್ಟಣದ ಕೆಲವರ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿ ಸಾರ್ವಜನಿಕರು ಆತಂಕ ಸೃಷ್ಠಿಯಾಗಿತ್ತು. ಇದೀಗ ಪಹಣಿ ಪತ್ರಿಕೆ ಯಲ್ಲಿ ವಕ್ಫ್ ಹೆಸರು ತೆಗೆದು ಹಾಕಲಾಗಿದ್ದು, ಎಲ್ಲರಲ್ಲೂ ಸಂಸತ ಮೂಡಿದೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಮಾತನಾಡಿದ ಅವರು, ನಾಗರಿಕರಿಗೆ ನ್ಯಾಯ ಒದಗಿಸುವ ಕುರಿತು ಡಿ.4ರಂದು ತಹಸೀಲ್ದಾರ್.ಎಂ.ಎನ್. ಬಳಿಗಾರ ಅವರ ಸಮ್ಮುಖದಲ್ಲಿ ಬೋರಗಾಂವ ಪಟ್ಟಣ ಪಂಚಾಯಿತಿಯಲ್ಲಿ ನಾಗರಿಕರ ಸಭೆ ನಡೆಸಿ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದೆ. ಸಚಿವ ಸತೀಶ ಜಾರಕಿಹೊಳಿ ಸೇರಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪಹಣಿ ಪತ್ರಿಕೆಯಲ್ಲಾದ ತಪ್ಪು ಸರಿಪಡಿಸುವಂತೆ ಮನವಿ ಮಾಡಿದ್ದೆ. ಆ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿಂಟು ಕಾಂಬಳೆ, ಉಪಾಧ್ಯಕ್ಷೆ ಭಾರತಿ ವಾಸವಾಡೆ, ಸದಸ್ಯ ಅಭಯಕುಮಾರ ಮಗದುಮ್, ಮಾಣಿಕ ಕುಂಬಾರ, ಪ್ರದೀಪ ಮಾಳಿ, ಜಾವೇದ್ ಮಕಾಂದರ, ದಿಗಂಬರ ಕಾಂಬಳೆ, ಶೋಭಾ ಹಾವಲೆ, ವರ್ಷಾ ಮನಗುತ್ತೆ, ರುಕ್ಸಾನಾ ಅಫ್ರಾಜ್, ಗಿರಿಜಾ ವಠಾರೆ, ಸುವರ್ಣ ಸೋಬಾನೆ, ತುಳಷಿದಾಸ ವಸವಾಡೆ, ರೋಹಿತ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net