ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

17..3
ಸದಲಗಾ ಪಟ್ಟಣದ ಬಸವೇಶ್ವರ ಪಿಕೆಪಿಎಸ್‌ನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಗುಂಡಕಲ್ಲೆ ಮಾತನಾಡಿದರು. ಸುರೇಶ ಕುಂಬಾರ, ಸುನೀಲ ತೋರಗಲ, ಜೈಸಿಂಗ್ ಶಿತೋಳೆ ಇತ್ತರರಿದ್ದರು.
Published on

ಬೋರಗಾಂವ: ಕೇಂದ್ರ ಸರ್ಕಾರದ ಆದೇಶದಂತೆ ಶ್ರೀ ಬಸವೇಶ್ವರ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಎಂದು ಮರುನಾಮಕರಣ ಮಾಡಲಾಗಿದ್ದು, ಎಲ್ಲ ಸದಸ್ಯರು ಪಹಣಿ ಪತ್ರಿಕೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ಸಂಸ್ಥೆಯ ಅಧ್ಯಕ್ಷ ಬಸವರಾಜ ಗುಂಡಕಲ್ಲೆ ಹೇಳಿದರು.

ಸದಲಗಾ ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಬಸವೇಶ್ವರ ಪಿಕೆಪಿಎಸ್ ಸಂಘದ 14ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಆಧಾರ್ ಲಿಂಕ್‌ನಂತಹ ಷರತ್ತುಗಳನ್ನು ಪೂರೈಸಿದ ಸದಸ್ಯರಿಗೆ ಮಾತ್ರ ಬೆಳೆ ಸಾಲ, ಕೃಷಿ ಸಂಬಂತ ಸಾಲ ಸಿಗಲಿದೆ ಎಂದರು.

784 ಸದಸ್ಯರು, ಷೇರು ಬಂಡವಾಳ 59.97 ಲಕ್ಷ ರೂ., 1.81 ಕೋಟಿ ರೂ. ನಿ, 11.53 ಕೋಟಿ ರೂ. ಠೇವಣಿ, 9.61 ಕೋಟಿ ರೂ. ಸಾಲ ವಿತರಿಸಲಾಗಿದೆ. 2.38 ಕೋಟಿ ರೂ. ಬಡ್ಡಿ ರಹಿತ ಬೆಳೆ ಸಾಲ ವಿತರಿಸಲಾಗಿದೆ. ಆರ್ಥಿಕ ವರ್ಷಾಂತ್ಯಕ್ಕೆ 18.19 ಲಕ್ಷ ರೂ. ಲಾಭವಾಗಿದೆ ಎಂದರು.

ಸಿಇಒ ಸುರೇಶ ಕುಂಬಾರ ಮಾತನಾಡಿದರು. ನಿರ್ದೇಶಕರಾದ ಸುನೀಲ ತೋರಗಲ, ಜೈಸಿಂಗ್ ಶಿತೋಳೆ, ರಾಜು ಕೋಗಲೆ, ಅನಿಲ ಮನಗುಳೆ, ಮಹಾವೀರ ಉದ್ಗಾವೆ, ಅಣ್ಣಾಸಾಬ ಡಾಂಗೆ, ಮೂಸಾ ಅಪರಾಜ್, ಶ್ರವಣ ಕರಂಗಳೆ, ರಾಜು ಮಾನೆ, ಸಂತೋಷ ಕುಂಬಾರ, ಸುೀರ ಕೋರೆ, ಉದಯಕುಮಾರ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net