ಪೋಷಣ ಅಭಿಯಾನ ಕಾರ್ಯಕ್ರಮ

poshan abiyana
Published on

ಮಡಿಕೇರಿ: ಎಂ.ಬಾಡಗ ೧ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.


ಕಾರ್ಯಕ್ರಮವನ್ನು ಕಾಂತೂರು ಮೂರ್ನಾಡು ಪಂಚಾಯತ್ ಅಧ್ಯಕ್ಷ ಕುಶನ್ ರೈ ಉದ್ಘಾಟಿಸಿ ಮಾತನಾಡಿ, ಮನೆಯ ಹಿತ್ತಲಿನಲ್ಲಿ ಸೊಪ್ಪು, ತರಕಾರಿಗಳನ್ನು ಬೆಳೆಸುವಂತಾಗಬೇಕು. ಮನೆ ಸುತ್ತ ಬೆಳೆದ ತರಕಾರಿಗಳನ್ನು ಉಪಯೋಗಿಸುವುದರಿಂದ ಹೆಚ್ಚಿನ ಪೌಷ್ಟಿಕಯುಕ್ತ ಆಹಾರ ಪಡೆಯಬಹುದು ಎಂದು ತಿಳಿಸಿದರು.


ಹಿರಿಯ ಆರೋಗ್ಯ ಮಹಿಳೆಯ ಸಹಾಯಕಿ ಲಲಿತಾ ಮಾತನಾಡಿ, ಹೆಚ್ಚಾಗಿ ಹಣ್ಣು ತರಕಾರಿ ಮೊಳಕೆ ಬರಿಸಿದ ಕಾಳುಗಳು ಪೌಷ್ಟಿಕ ಯುಕ್ತ ಸೊಪ್ಪುಗಳು ತರಕಾರಿಗಳನ್ನು ನಾವು ಬೆಳೆಸಿ ಉಪಯೋಗಿಸಬೇಕು ಎಂದು ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಮಕ್ಕಳ ಪಾಲಕರು, ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳು, ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ, ಸಹಾಯಕಿಯಾದ ಪ್ರೀತ ಹಾಜರಿದ್ದರು. ಎಂಬಾಡದ ಅಂಗನವಾಡಿ ಕಾರ್ಯಕರ್ತೆಯಾದ ಜಯಂತಿ ಸ್ವಾಗತಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net