

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳ ವ್ಯಾಸಂಗದ ಸಂದರ್ಭದಲ್ಲಿ ಪೂರಕ ಪೌಷ್ಟಿಕ ಆಹಾರ ಸೇವನೆ ಅತೀ ಮಹತ್ವ ಪಡೆದುಕೊಂಡಿದೆ. ಪೌಷ್ಟಿಕ ಆಹಾರ ಪಡೆಯುವುದು ಮಕ್ಕಳ ಹಕ್ಕು ಎಂದು ಜಿಪಂ ಸಿಇಒ ಸ್ವರೂಪ ಟಿ.ಕೆ. ಹೇಳಿದರು.
ನಗರದ ಡಾ. ಆರ್. ಎನ್. ಶೆಟ್ಟಿ ಕ್ರೀಡಾಂಗಣ ಬಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ ಅಡಿ ಶನಿವಾರ ಏರ್ಪಡಿಸಿದ್ದ ಪೌಷ್ಟಿಕ ಆಹಾರ ವಿತರಣೆಯ ಜಿಲ್ಲಾ ಮಟ್ಟದ ಸಮಾರಂಭದಲ್ಲಿ ಪೂರಕ ಪೌಷ್ಟಿಕ ಆಹಾರ ವಿತರಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣದ ಜಿಲ್ಲಾ ಯೋಜನಾಧಿಕಾರಿ ರೂಪಾ ಪುರಮಕರ ಮಾತನಾಡಿದರು. ರಾಜ್ಯ ಸರ್ಕಾರದ ವತಿಯಿಂದ 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಶೇಂಗಾ ಚಿಕ್ಕಿ ಮತ್ತು ಬಾಳೆಹಣ್ಣು ವಿತರಿಸಲಾಯಿತು. ಡಿಡಿಪಿಐ ಎಸ್. ಎಸ್. ಕೆಳದಿಮಠ ಅಧ್ಯಕ್ಷತೆವಹಿಸಿದ್ದರು.
ಶಹರ ಬಿಇಒ ಅಶೋಕಕುಮಾರ ಸಿಂದಗಿ, ಅಕ್ಷರ ದಾಸೋಹ ಯೋಜನೆ ಅಧಿಕಾರಿಗಳಾದ ಡಾ. ಸಂಗಮೇಶ ಬಂಗಾರಿಮಠ ಮತ್ತು ಲಲಿತಾ ಹರ್ಲಾಪುರ, ಶಾಲೆ ಮುಖ್ಯಾಧ್ಯಾಪಕಿ ಶ್ರೀದೇವಿ ಲದ್ದಿಮಠ, ರಮೇಶ ತಳವಾರ, ಶಿವಾನಂದ ಮುತ್ವಾಡ, ಕಮಲಾ ಸಾಲಿಮಠ, ಅರ್ಜುನ ಲಮಾಣಿ, ಮಾಧುರಿ ಕುಲಕರ್ಣಿ, ಸುರೇಶ ಜಟ್ಟೆನವರ, ಗಾಯತ್ರಿ ಜೋಶಿ, ಎಸ್. ಸುಜಾತಾ, ಛಾಯಾ ಘೋರ್ಪಡೆ, ಪವನ ಕುಲಕರ್ಣಿ ಇದ್ದರು.