

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ರಾಜ್ಯದಲ್ಲೂ ಅಲ್ಲಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗುತ್ತಿರುವ ಬೆನ್ನಲ್ಲೇ ಪಶುವೈದ್ಯಕೀಯ ಇಲಾಖೆ ಅಲರ್ಟ್ ಆಗಿದ್ದು, ಹಲವು ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಎಲ್ಲ ಜಿಲ್ಲೆಗಳ ತನ್ನ ಅಧಿಕಾರಿಗಳಿಗೆ ಸೂಚಿಸಿದೆ.
ಇದಕ್ಕೆ ಪೂರಕವಾಗಿ ಇಲಾಖೆಯ ಹಿರಿಯ ಅಧಿಕಾರಿಗಳು ಶುಕ್ರವಾರ ಜಿಲ್ಲಾ ಹಾಗೂ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫ್‌ರೆನ್ಸ್ ನಡೆಸಿ ಹೈ ಅಲರ್ಟ್‌ಗೆ ತಾಕೀತು ಮಾಡಿದ್ದಾರೆ.
ಕುಕ್ಕುಟೋದ್ಯಮ ಹೆಚ್ಚಿರುವ ಪ್ರದೇಶ, ಪಕ್ಷಿಧಾಮಗಳ ಮೇಲೆ ವಿಶೇಷ ನಿಗಾ ವಹಿಸುವುದು ಒಂದು ಹೆಜ್ಜೆಯಾದರೆ, ಹಕ್ಕಿ ಜ್ವರ ಕಂಡು ಬಂದ ಪ್ರದೇಶಗಳ ಕೋಳಿಗಳ ಸಾಗಣೆಯಾಗದಂತೆ ನೋಡಿಕೊಳ್ಳಲು ಅಂತಾರಾಜ್ಯ ಗಡಿಗಳಲ್ಲಿ ತಕ್ಷಣದಿಂದಲೇ ಚೆಕ್‌ಪೋಸ್ಟ್ ನಿರ್ಮಾ ಣಕ್ಕೆ ಇಲಾಖೆ ನಿರ್ದೇಶಕರು ಹಾಗೂ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರತಿ ಚೆಕ್‌ಪೋಸ್ಟ್‌ಗಳಲ್ಲಿ ಪಶುವೈದ್ಯರು, ವೈದ್ಯಕೀಯ ನಿರೀಕ್ಷಕರು ಹಾಗೂ ಇಬ್ಬರು ಸಿಬ್ಬಂದಿಯ ತಂಡ ಬೀಡು ಬಿಟ್ಟು ತಪಾಸಣೆ ನಡೆಸಲಿದೆ. ಕೋಳಿಗಳನ್ನು ಎಲ್ಲಿಂದ ತರಲಾಗುತ್ತಿದೆ? ಪಾಸಿಟಿವ್ ಎಂದು ಕಂಡು ಬಂದಿರುವ ಆಫೆಕ್ಟೆಡ್ ಜೋನ್‌ನಿಂದ ಏನಾದರೂ ಬಂ ದಿದೆಯೋ ಹೇಗೆ ಎಂಬಿತ್ಯಾದಿ ಸಂಪೂರ್ಣ ತಪಾಸಣೆ ನಡೆಸಲಾಗುತ್ತದೆ.
ಒಂದು ವೇಳೆ ಎಚ್5ಎನ್1(ಅಜಿಚ್ಞ ಜ್ಞ್ಛ್ಝ್ಠಿಛ್ಞ್ಢಿ ಜ್ಟ್ಠಿ)ವೈರಾಣು ಇದೆ ಎಂದು ಸಾಬೀತಾಗಿರುವ ಬಾಧಿತ ಪ್ರದೇಶಗಳಿಂದ ಕೋಳಿಗಳು ಬಂದಿದ್ದರೆ, ಅವುಗಳನ್ನು ಮುಂದೆ ಸಾಗಿಸದಂತೆ, ನಾಶ ಪಡಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂದು ನಿರ್ದೇಶಿಸಿ ದ್ದಾರೆ. ಇದಕ್ಕಾಗಿ ಪ್ರತ್ಯೇಕವಾಗಿ ಆರ್‌ಆರ್ ಟೀಮ್(ರ‌್ಯಾಪಿಡ್ ರೆಸ್ಪಾನ್ಸ್) ರಚಿಸಲಾಗಿದೆ. ವೈದ್ಯರು, ವೈದ್ಯಕೀಯ ನಿರೀಕ್ಷಕ ಹಾಗೂ ಮೂ ವರು ಸಿಬ್ಬಂದಿ ಈ ಟೀಮ್‌ನಲ್ಲಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಕೋಳಿ, ಪಕ್ಷಿಗಳು ಮೃತಪಟ್ಟಿದ್ದರೆ ಕೂಡಲೇ ಪ್ರಯೋಗಾಲಯಕ್ಕೆ ಕಳಿಸಬೇಕು. ಅಂಥ ಪ್ರದೇಶದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿಗಳ ಸಾಗಾಟ ನಿರ್ಬಂಧಿಸಬೇಕು. ಪಾಸಿಟಿವ್ ಎಂದು ರಿಪೋರ್ಟ್ ಬಂದಿರುವ ಬಾಧಿತ ಪ್ರದೇಶದಲ್ಲಿ ಸೂಕ್ತ ಔಷಧ ಸಿಂಪಡಣೆಯೊಂದಿಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ಕೋಳಿ, ಹಕ್ಕಿಪಕ್ಷಿಗಳ ಕಳೆಬರವನ್ನು 10 ಅಡಿ ಆಳದ ಗುಂಡಿಯಲ್ಲಿ ಬ್ಲೀಚಿಂಗ್ ಪೌಡರ್, ಸುಣ್ಣದೊಂದಿಗೆ ಮುಚ್ಚಬೇಕಿದೆ.
ಪಾಸಿಟಿವ್ ಪ್ರದೇಶದಲ್ಲಿ ಮೂರು ತಿಂಗಳ ಕಾಲ ಕೋಳಿ ಸಾಕಣೆಗೆ ನಿರ್ಬಂಧ ವಿಧಿಸಲಾಗುತ್ತದೆ. ಇಲಾಖೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಈ ನಿಟ್ಟಿನಲ್ಲಿ ಸೂಕ್ತ ಅರಿವು ಮೂಡಿಸಲು ತಕ್ಷಣಕ್ಕೆ ಕಾರ‌್ಯಾಗಾರ ನಡೆಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
----
ಕೋಟ್
ರಾಜ್ಯದಲ್ಲಿ 20ನೇ ಜಾನುವಾರು ಗಣತಿಯಂತೆ 6,18,19,269 ಕೋಳಿಗಳಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅಂದಾಜು 19,11,291 ಕೋಳಿಗಳಿವೆ. ಜಿಲ್ಲೆಯಲ್ಲಿ ಈವರೆಗೂ ಎಲ್ಲೂ ಹಕ್ಕಿ ಜ್ವರ ಕಂಡು ಬಂದಿಲ್ಲ. ಮೊಟ್ಟೆ ಮತ್ತು ಚಿಕನ್ ಅನ್ನು ಚೆನ್ನಾಗಿ ಬೇಯಿಸಿ ಸೇವಿಸಿದರೆ ಅಪಾಯವಿಲ್ಲ. ಜಿಲ್ಲೆಯ ಅಂತಾರಾಜ್ಯ ಗಡಿಗಳಾದ ಹಿರಿಯೂರು ತಾಲೂಕು ಧ ರ್ಮಪುರ, ಮೊಳಕಾಲ್ಮೂರು ತಾಲೂಕು ಎದ್ದುಲಬೊಮ್ಮಯ್ಯನಹಟ್ಟಿ ಹಾಗೂ ಚಳ್ಳಕೆರೆ ತಾಲೂಕು ನಾಗಪ್ಪನಹಳ್ಳಿ ಗೇಟ್ ಬಳಿ ಚೆಕ್‌ಪೋಸ್ಟ್ ಗಳನ್ನು ನಿರ್ಮಿಸಲಾಗುತ್ತದೆ. ಜನರಲ್ಲಿ ವಿನಾಕಾರಣ ಆತಂಕ ಬೇಡ.
ಡಾ.ಎನ್.ಕುಮಾರ್, ಉಪನಿರ್ದೇಶಕ, ಪಶುವೈದ್ಯಕೀಯ ಇಲಾಖೆ, ಚಿತ್ರದುರ್ಗ.
---
(ಸಿಟಿಡಿ 28 ಡಾ.ಎನ್.ಕುಮಾರ್)
--
(ಸೂಕ್ತ ಚಿತ್ರ ಬಳಸಿ)
----