ಪಶು ಆಹಾರ, ಐಸ್‌ಕ್ರೀಂ ತಯಾರಿಕೆಗೆ ಅನುಮತಿ

17-pnp 1
Published on

ಪಾಂಡವಪುರ: ಮನ್‌ಮುಲ್ ವತಿಯಿಂದಲೇ ಪಶು ಆಹಾರ, ಐಸ್‌ಕ್ರೀಂ ಮತ್ತು ನೀರಿನ ಬಾಟಲಿಗಳ ತಯಾರಿಕೆಗೆ ಕರ್ನಾಟಕ ಹಾಲು ಮಹಾ ಮಂಡಳದ ಅನುಮತಿ ಕೋರಲಾಗಿದ್ದು, ಈ ಯೋಜನೆ ಅನುಷ್ಠಾನಗೊಂಡರೆ ಮನ್‌ಮುಲ್‌ನ ಆದಾಯ ಹೆಚ್ಚಾಗಲಿದೆ ಎಂದು ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.

ತಾಲೂಕಿನ ಡಿಂಕಾ ಗ್ರಾಮದಲ್ಲಿ ಗುರುವಾರ ಡೇರಿ ಹೆಚ್ಚುವರಿ ಕಟ್ಟಡ ಹಾಗೂ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಾನು ನಿರ್ದೇಶಕನಾಗಿ ಆಯ್ಕೆಯಾದ ಹೊಸತರಲ್ಲಿ ಹಾಲಿನ ಪೌಡರ್‌ಗೆ ಬೆಲೆ ಇಲ್ಲದೆ 4 ಸಾವಿರ ಟನ್ ಹಾಲಿನ ಪೌಡರನ್ನು ದಾಸ್ತಾನು ಇಡಲಾಗಿತ್ತು. ಬಳಿಕ ಬೆಲೆ ಹೆಚ್ಚಾದ ಕಾರಣ ಈ ಪೌಡರ್ ಮಾರಾಟ ಮಾಡಿ ಬಂದ 40 ಕೋಟಿ ರೂ. ಲಾಭವನ್ನು ರೈತರಿಗೆ ನೀಡಲಾಯಿತು ಎಂದರು.
ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿಗಳಾದ ಎಚ್.ಎನ್.ಉಷಾ, ನಿವೇದಿತಾ, ಜಗದೀಶ್, ನಿತಿನ್, ಡೇರಿ ಅಧ್ಯಕ್ಷ ಮಹದೇವಪ್ಪ, ಉಪಾಧ್ಯಕ್ಷೆ ಸಣ್ಣನಿಂಗಮ್ಮ, ಕಾರ್ಯದರ್ಶಿ ಡಿ.ಎಂ.ಶಿವಪ್ಪ, ಹಾಲು ಪರೀಕ್ಷಕ ಜಿ.ಕೇಶವಚಾರ್, ನಿರ್ದೇಶಕರಾದ ದೇವೇಗೌಡ, ಮಲ್ಲಿಕಾರ್ಜುನಗೌಡ, ಡಿ.ಸಿ.ಅಶೋಕ್, ಡಿ.ಸಿ.ಅನಿಲ್‌ಕುಮಾರ್, ಚಂದ್ರಶೇಖರ್, ಮಹೇಶಾಚಾರಿ, ಚಲುವರಾಜು, ಶಶಿಕಲಾ, ಶಿವಮಾದಶೆಟ್ಟಿ, ಚನ್ನಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net