ಪಶು ಆಸ್ಪತ್ರೆ ಬಲವರ್ಧನ ತರಬೇತಿ ಕೇಂದ್ರ ಉದ್ಘಾಟನೆ ಯಾವಾಗ ?

Untitled design(15)
ಕೊಟ್ಟೂರು ಪಶು ಆಸ್ಪತ್ರೆ ಕಾಂಪೌಂಡ ಒಳಗಿರುವ ನೂತನ ಪಶು ಆಸ್ಪತ್ರೆ ಬಲವರ್ಧನ ತರಬೇತಿ ಕೇಂದ್ರದ ಹೊರನೋಟ
Published on

ಕೊಟ್ಟೂರು: ಇಲ್ಲಿನ ಪಶು ಆಸ್ಪತ್ರೆ ಬಲವರ್ಧನೆ ತರಬೇತಿ ಕೇಂದ್ರ 2018-19ನೇ ಸಾಲಿನಲ್ಲಿ ನಿರ್ಮಾಣವಾದರೂ ಉದ್ಘಾಟನೆ ಭಾಗ್ಯ ದೊರೆತಿಲ್ಲ.

ಭೀಮನಾಯ್ಕ ಶಾಸಕರಾಗಿದ್ದಾಗ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 21.12 ಲಕ್ಷ ರೂ. ವೆಚ್ಚದಲ್ಲಿ ಕೆ.ಆರ್.ಎ.ಡಿ.ಎಲ್ ನಿಂದ ಕಟ್ಟಡ ನಿರ್ಮಾಣವಾಗಿದೆ. ಜಾನುವಾರು ಹಾಗೂ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ತಜ್ಞ ವೈದ್ಯರಿಂದ ತರಬೇತಿ ನೀಡುವ ಉದ್ದೇಶದಿಂದ ನಿರ್ಮಿಸಲಾಗಿದೆ.

ತರಬೇತಿ ಪಡೆದು ಜಾನುವಾರು ಮತ್ತು ಕುರಿ, ಮೇಕೆಗಳಿಗೆ ಬರುವ ರೋಗಗಳಿಂದ ಮುಕ್ತಿಗೊಳಿಸಿ ಉತ್ಪನ್ನಗಳನ್ನು ಅಧಿಕಗೊಳಿಸುವ ಸದುದ್ದೇಶ ಇದರದ್ದಾಗಿದೆ. ರೈತರಿಗೆ ತರಬೇತಿ ನೀಡಲು ಕಟ್ಟಡವನ್ನು ಇಲಾಖೆಗೆ ಹಸ್ತಾಂತರ ಮಾಡಲು ಕೆಡಿಪಿ ಮತ್ತು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಶು ವೈದ್ಯರ ಕೇಳಿದ್ದರು. ಆದರೆ ಕೆ.ಆರ್.ಎಲ್.ಡಿ.ಎಲ್. ತಲೆ ಕೆಡೆಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಕಟ್ಟಡವನ್ನು ಇನ್ನೂ ಪಶು ಇಲಾಖೆಗೆ ಹಸ್ತಾಂತರ ಮಾಡಿಲ್ಲ. ಇದರಿಂದಾಗಿ ಜಾನುವಾರು ಮತ್ತು ಕುರಿ, ಮೇಕೆ ಸಾಕಾಣಿಕೆದಾರರು ತರಬೇತಿಯಿಂದ ವಂಚಿತರಾಗುವಂತಾಗಿದೆ.

ಶಾಸಕ ನೇಮಿರಾಜ್ ನಾಯ್ಕ ಅವರಿಗೆ ಈಗಾಗಲೇ ಕೇಂದ್ರವನ್ನು ಪಶು ಇಲಾಖೆಗೆ ಹಸ್ತಾಂತರಿಸಲು ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಜಾನುವಾರು ಮತ್ತು ಕುರಿ, ಮೇಕೆಗಳಿಗೆ ಬರುವ ರೋಗದಿಂದ ಕಾಪಾಡಿಕೊಂಡು ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಸರ್ಕಾರ ನಿರ್ಮಾಣಮಾಡಿರುವ ಕಟ್ಟಡ ಪ್ರಯೋಜನಕ್ಕೆ ಬಾರದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net