ಪವಾಡ ಪುರುಷ ಸಿದ್ಧರಾಮ ಶ್ರೀ

klb2
ಆಳಂದ ತಾಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಡ ಮಕ್ಕಳ ಉಚಿತ ವಸತಿ ಹಾಗೂ ಪ್ರಸಾದ ನಿಲಯಕ್ಕೆ ಜ್ಞಾನ ದಾಸೋಹ ಜ್ಞಾನಿಗಳಾಗಿ ಕ್ಯೂಆರ್ ಕೋಡ್ ಅನ್ನು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಬಿಡುಗಡೆಗೊಳಿಸಿದರು. ಡಾ.ಮುರುಘರಾಜೇಂದ್ರ ಶಿವಯೋಗಿಗಳು, ಶ್ರೀ ವೀರಭದ್ರ ಶಿವಾಚಾರ್ಯರು, ಶ್ರೀ ಸದಾಶಿವ ಸ್ವಾಮೀಜಿ, ಶಾಸಕ ದೊಡ್ಡನಗೌಡ ಪಾಟೀಲ್ ಇತರರಿದ್ದರು.
Published on

ಆಳಂದ: ಶ್ರೀ ಸಿದ್ಧರಾಮ ಶಿವಯೋಗಿಗಳು ಭಕ್ತರ ಬಾಳು ಬೆಳಗುವುದರ ಜತೆಗೆ ಪವಾಡಗಳ ಮೂಲಕ ಜನರ ನೋವುಗಳನ್ನು ದೂರ ಮಾಡಿದ್ದಾರೆ. ಅವರೊಬ್ಬ ಶ್ರೇಷ್ಠ ಪವಾಡ ಪುರುಷ ಎಂದು ಮುಖ್ಯಮಂತ್ರಿ ಸಲಹೆಗಾರರ ಬಿ.ಆರ್.ಪಾಟೀಲ್ ಹೇಳಿದರು.

ಜಿಡಗಾ ನವಕಲ್ಯಾಣ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧರಾಮ ಶಿವಯೋಗಿಗಳ 96ನೇ ಜಯಂತಿ ಹಾಗೂ ಶಿವಯೋಗಿ ಜ್ಞಾನ ಮಂದಿರ ವಸತಿ ನಿಲಯ ಲೋಕಾರ್ಪಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನುದ್ದಕ್ಕೂ ಅನ್ನ ದಾಸೋಹ ಸೇವೆಯಲ್ಲಿ ತೊಡಗಿ, ಭಕ್ತರ ಬಾಳಿನ ದಾರಿ ದೀಪವಾಗಿದ್ದರು. ಅವರ ಹಾಕಿ ಕೊಟ್ಟ ಮಾರ್ಗದಲ್ಲಿಯೇ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾಗುತ್ತಿದ್ದಾರೆ ಎಂದು ತಿಳಿಸಿದರು.

ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು, ಸೇಡಂನ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ, ಇಂದು ಸರ್ಕಾರ ಮಾಡಬೇಕಾದ ಕಾರ್ಯವನ್ನು ಮಠ-ಮಾನ್ಯಗಳು ಮಾಡುತ್ತಿವೆ. ಜನಪ್ರತಿನಿಧಿಗಳು ಕೈ ಜೋಡಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲು ಸಾಧ್ಯ ಎಂದರು.

ಇAಡಿ ಶಾಸಕ ಯಶವಂತಗೌಡ ಪಾಟೀಲ್, ಕುಷ್ಠಗಿ ಶಾಸಕ ದೊಡ್ಡನಗೌಡ ಪಾಟೀಲ್, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಬಬಲೇಶ್ವರದ ವಿಜುಗೌಡ ಪಾಟೀಲ್ ಮಾತನಾಡಿ, ಜಿಡಗಾ ಶ್ರೀಗಳು ನಿರಂತರ ದಾಸೋಹದ ಜತೆಗೆ ಇಲ್ಲಿ ಕಲಿಯುವ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ನೀಡುತ್ತಿರುವುದು ಮಹಾನ್ ಕಾರ್ಯ. ಇದು ಹೀಗೆ ಸಾಗಲಿ, ನಾವೆಲ್ಲರೂ ಬೆಂಬಲಿಸುತ್ತೇವೆ ಎಂದು ಭರವಸೆ ನೀಡಿದರು.

ಬಬಲಾದ- ಯಳಸಂಗಿಯ ಶ್ರೀ ಗುರುಪಾದಲಿಂಗ ಶಿವಯೋಗಿಗಳು, ಮಾದನಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಚಿಣಮಗೇರಾದ ಶ್ರೀ ವೀರಮಹಾಂತ ಶಿವಾಚಾರ್ಯರು, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್, ಪ್ರಮುಖರಾಡ ಜಯಶ್ರೀ ಮತ್ತಿಮಡು, ಡಾ.ವಿಕ್ರಮ್ ಸಿದ್ದಾರೆಡ್ಡಿ, ಡಾ.ಸಂಗ್ರಾಮ್ ಬಿರಾದರ್, ಡಾ.ವಿಶ್ವನಾಥ್ ರೆಡ್ಡಿ ಇತರರಿದ್ದರು.

ಆಸ್ಥಾನದ ಕಲಾವಿದರು ಪ್ರಾರ್ಥನಾ ಗೀತೆ ಪ್ರಸ್ತುತ ಪಡಿಸಿದರು. ಪರಮಪೂಜ್ಯ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ತೊಟ್ಟಿಲು ಕಾರ್ಯಕ್ರಮ ನೆರವೇರಿತು. ವಿದ್ಯಾರ್ಥಿಗಳಿಗೆ ವಸತಿ ನಿಲಯ ಹಾಗೂ ಕಲಿಕಾ ಕಿಟ್ ವಿತರಿಸಲಾಯಿತು. ಯೋಗಿ ಜ್ಞಾನ ಮಂದಿರದ ಉಚಿತ ಶಿಕ್ಷಣಕ್ಕಾಗಿ ರೇಜರ್ ಪ್ಲೇ ಮುಖಾಂತರ ವೆಬ್‌ಸೈಟ್ ಬಿಡುಗಡೆ ಮಾಡಲಾಯಿತು. ಶಿವಯೋಗಿ ದಿನಪತ್ರಿಕೆ ಜನಾರ್ಪಣೆ ಮಾಡಲಾಯಿತು. ಕರ್ನಾಟಕ, ಮಹಾರಾಷ್ಟç, ಆಂಧ್ರ, ಗೋವಾ, ತೆಲಂಗಾಣ ಸೇರಿ ವಿವಿಧೆಡೆಯಿಂದ ಅಪಾರ ಭಕ್ತರು ಪಾಲ್ಗೊಂಡಿದ್ದರು.

ವಿವಿಧ ಧಾರ್ಮಿಕ ಕಾರ್ಯಕ್ರಮ: ಶ್ರೀ ಸಿದ್ಧರಾಮೇಶ್ವರ ಶಿವಯೋಗಿಗಳ ಜಯಂತಿ ನಿಮಿತ್ತ ಜಿಡಗಾ ನವಕಲ್ಯಾಣ ಮಠದಲ್ಲಿನ ಗದ್ದುಗೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಬೆಳಗ್ಗೆ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ, ಮಹಾ ರುದ್ರಾಭಿಷೇಕ, ವಿಶೇಷ ಅಲಂಕಾರ ನೆರವೇರಿತು. ಬಳಿಕ ನೂತನ ವಸತಿ ನಿಲಯ ಲೋಕಾರ್ಪಣೆಗಾಗಿ ಹೋಮ-ಹವನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net