ಪವರ್ ಟಿಲ್ಲರ್, ಟ್ರ್ಯಾಕ್ಟರ್ ಖರೀದಿಗೆ ಅರ್ಜಿ ಆಹ್ವಾನ

Published on

ಚಾಮರಾಜನಗರ: ತೋಟಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್.ಹೆಚ್.ಎಂ.) ಯೋಜನೆಯಡಿ ಪವರ್ ಟಿಲ್ಲರ್ ಹಾಗೂ ಟ್ರ್ಯಾಕ್ಟರ್ ಖರೀದಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ.50ರಷ್ಟು ನೀಡುವ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಫಲಾನುಭವಿಗಳು ರೈತರಾಗಿದ್ದು ಜಮೀನು ಅವರ ಹೆಸರಿನಲಿರಬೇಕು.

ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ಆಸಕ್ತ ರೈತರು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಿ ಅನುಮೋದಿತ ಕಂಪನಿ, ಸಂಸ್ಥೆ, ಏಜೆನ್ಸಿ, ಮಾಡೆಲ್ ಕುರಿತು ಮಾಹಿತಿ ಪಡೆದು ನಿಗದಿತ ಅರ್ಜಿ ನಮೂನೆ, ಭಾವಚಿತ್ರ, ಪಹಣಿ, ಆಧಾರ್ ಕಾರ್ಡ್ ಜೆರಾಕ್ಸ್, ಕೃಷಿ ಇಲಾಖೆ ಬೇಬಾಕಿ, ಜಾತಿ ಪ್ರಮಾಣ ಪತ್ರ, ತಾಕಿನ ಛಾಯಾಚಿತ್ರ, ಬೆಳೆ ದೃಢೀಕರಣ, ಆರ್.ಡಿ. ಸಂಖ್ಯೆಯುಳ್ಳ ಜಾತಿ ಪ್ರಮಾಣ ಪತ್ರ, ಅನುಮೋದಿತ ಕಂಪನಿ, ಸಂಸ್ಥೆಯಿಂದ ಪವರ್ ಟಿಲ್ಲರ್/ಟ್ರ್ಯಾಕ್ಟರ್‌ನ ಅಂದಾಜು ಪಟ್ಟಿ (ಎಸ್ಟಿಮೇಟ್) ಇತ್ಯಾದಿಗಳನ್ನು ಜೂನ್ 6ರೊಳಗೆ ಸಲ್ಲಿಸಿ ಹೆಸರು ನೊಂದಾಯಿಸಿಕೊಳ್ಳಬೇಕು.

2025-26ನೇ ಸಾಲಿನಡಿ ಕರ್ನಾಟಕ ಸರ್ಕಾರ, ತೋಟಗಾರಿಕೆ ಇಲಾಖೆಯ ವತಿಯಿಂದ ಅನುಮೋದಿತ ಕಂಪನಿ/ಸಂಸ್ಥೆಗಳಿಂದ (ಅಪ್ರೂವ್ಡ್ ಮಾಡೆಲ್ಸ್) ಮಾತ್ರ ಪವರ್ ಟಿಲ್ಲರ್ ಅಥವಾ ಟ್ರ್ಯಾಕ್ಟರ್ ಖರೀದಿಸಬೇಕಾಗಿರುತ್ತದೆ. ಈಗಾಗಲೇ ಅಥವಾ ಹಿಂದಿನ ವರ್ಷಗಳಲ್ಲಿ ಖರೀದಿಸಿದ ಉಪಕರಣಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ. 20 ಪಿ.ಟಿ.ಒ. (ಹೆಚ್.ಪಿ.) ಅಶ್ವ ಶಕ್ತಿಗಿಂತ ಹೆಚ್ಚಿನ ಸಾಮರ್ಥ್ಯವಿರುವ ಟ್ಯಾಕ್ಟರ್‌ಗಳಿಗೆ ಸಹಾಯಧನ ನೀಡಲು ಅವಕಾಶವಿರುವುದಿಲ್ಲ. ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಿಂದ ಕಾರ್ಯದೇಶ/ವರ್ಕ್ ಆರ್ಡರ್ ವಿತರಿಸಿದ ನಂತರವೇ ಉಪಕರಣವನ್ನು ಖರೀದಿಸಬೇಕಾಗಿರುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net