ಪವನಸುತನಿಗೆ ಭಕ್ತರ ನಮೋ ನಮಃ

12ATAHNIGRAMIN1
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ದೇವಸ್ಥಾನವನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು, ಹನುಮ ಮೂರ್ತಿಗೆ ಹಾಲು, ಮೊಸರು, ಏಳನೀರು, ಚಂದನ, ಜೇನುತುಪ್ಪದೊಂದಿಗೆ ಕುಂಕುಮಾಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ಬಳಿಕ ಮಂಗಳಾರತಿಯಲ್ಲಿ ಪಾಲ್ಗೊಂಡ ಭಕ್ತಾದಿಗಳು ದರ್ಶನ ಪಡೆದು ಹರಕೆ ತೀರಿಸಿದರು. ಗ್ರಾಮದ ಸುಮಂಗಲೆಯರಿಂದ ಹನುಮನ ನಾಮಕರಣ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮ, ಗೀತಾ ಆರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಜೆ ಹನುಮನ ಪಲ್ಲಕ್ಕಿ ಮೆರವಣಿಗೆ ಗ್ರಾಮದಲ್ಲಿ ಅದ್ದೂರಿ ನಡೆಯಿತು.

ಅರ್ಚಕ ಹನುಮಂತ ಪೂಜಾರಿ, ಸೋಮೇಶ ಜೋಶಿ, ಶಿವಗೌಡ ನೇಮಗೌಡ, ಮಹಾದೇವಿ ಪೂಜಾರಿ, ಗೀತಾ ಬಡಿಗೇರ, ಮಹಾನಂದ ಪೂಜಾರಿ, ಅಮಿತ ದೇಸಾಯಿ, ಅನಂತ ದೇಶಪಾಂಡೆ, ರಾಚಪ್ಪ ಪೂಜಾರಿ, ರಾಜು ಪಾಟೀಲ, ಚಂದು ಶರಣ, ಪ್ರದೀಪ ಕುಂಬಾರ, ಸಂಜು ಮುದಕಣ್ಣವರ, ಸಚಿನ ಹಳಕಿ, ಇಬ್ರಾಹಿಂ ಮುಲ್ಲಾ, ಸಾಗರ ಕೋಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net