

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಪಾಂಡುರಂಗ ವಿಠ್ಠಲ, ರುಕ್ಮಿಣಿ ಸಪ್ತಾಹ ನಿಮಿತ್ತ ಶುಕ್ರವಾರ ಸಂಭ್ರಮದಿಂದ ಪಲ್ಲಕ್ಕಿ ಉತ್ಸವ ಜರುಗಿತು.
ವಿವಿಧ ಗ್ರಾಮಗಳಿಂದ ಸಂತರು ಆಗಮಿಸಿದ್ದರು. ದೇವಸ್ಥಾನದಲ್ಲಿ ಸಂತ ತುಕಾರಾಮರ ಜೀವನ ಚರಿತ್ರೆ ಕುರಿತು ಎರಡು ದಿನಗಳ ಪ್ರವಚನ ಕಾರ್ಯಕ್ರಮ ನೆರವೇರಿತು.
ಶುಕ್ರವಾರ ವಿಠ್ಠಲ-ರುಕ್ಮಿಣಿ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಮಹಾಭಿಷೇಕ ನೆರವೇರಿಸಲಾಯಿತು. ಬಳಿಕ ವಿಠ್ಠಲ ರುಕ್ಮಿಣಿ ಮೂರ್ತಿ ಪಲ್ಲಕ್ಕಿಯಲ್ಲಿ ಇಟ್ಟು ಗ್ರಾಮದ ಎಲ್ಲ ಬಡಾವಣೆ ಹಾಗೂ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರೆಲ್ಲರೂ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು.
ಸಂತರಾದ ಸಿದ್ದಪ್ಪ ಹವಾಲ್ದಾರ, ಕೀರ್ತನಕಾರರಾದ ಬಸು ಹಳ್ಳೂರ, ಪಿಂಟು ನಾರಗೊಂಡ, ಹನುಮಂತ ನಾಯಕ, ಸುರೇಶ ಮುರಗುಂಡಿ, ವಿಠ್ಠಲ ನಾಯಕ, ರಾಮು ಗೊರವ, ಚೆನ್ನಪ್ಪ ಬಿರಾದರ, ಸಂತೋಷ ಸಂಕ್ರಟ್ಟಿ, ಬಸು ವಾಡೇದ, ಶಿವಪ್ಪ ಬಿಸಲನಾಯಿಕ, ಸದಾಶಿವ ಒಟ್ಟಿ, ಭೀಮ ಕಿರಣಗಿ, ಸಂಗಪ್ಪ ಜಂಬಗಿ, ಶಿವಕುಮಾರ ಜನವಾಡ, ಪರಶುರಾಮ ಡಂಗಿ ಇತರರಿದ್ದರು.