ಪರ್ಸ್‌ನಲ್ಲಿದ್ದ ಮುತ್ತಿನ ಚಿನ್ನದ ಸರ ಕಳವು

Harpanahalli gold theft
Published on

ಹಾಸನ: ನಗರದ ಹೊಸ ಬಸ್ ನಿಲ್ದಾಣದಲ್ಲಿ ಸಿಟಿ ಬಸ್ಸಿಗೆ ಹತ್ತುವಾಗ ನೂಕುನುಗ್ಗಲಿನಲ್ಲಿ ಮಹಿಳೆಯೊಬ್ಬರ ಬ್ಯಾಗಿನ ಜೀಪ್ ತೆರೆದು ಅದರೊಳಗೆ ಇದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳ್ಳತನ ಮಾಡಲಾಗಿದೆ.

ಹಾಸನ ಟೌನ್ ಹೇಮಾವತಿ ನಗರ ವಾಸಿ ವಿಶಾಲಾಕ್ಷಿ ಅವರು ಆ. 23ರಂದು ಬೆಂಗಳೂರಿನಲ್ಲಿ ತಮ್ಮ ಚಿಕ್ಕಮ್ಮನ ಮಗಳ ಮನೆಯ ಗೃಹಪ್ರವೇಶ ಮುಗಿಸಿಕೊಂಡು ಬೆಂಗಳೂರಿನಿಂದ ಹಾಸನ ಹೊಸ ನಿಲ್ದಾಣಕ್ಕೆ ಮಧ್ಯಾಹ್ನ 2 ಗಂಟೆಗೆ ಬಂದಿದ್ದಾರೆ. ದಾಸರಕೊಪ್ಪಲು ಕಡೆಗೆ ಹೋಗುವ ಬಸ್ ನಿಲ್ದಾಣದ ಹತ್ತಿರ ನಿಂತಿದ್ದು, ದಾಸರಕೊಪ್ಪಲು ಕಡೆಗೆ ಹೋಗುವ ಬಸ್ ಬಂದಿದೆ. ಈ ವೇಳೆ ಬಸ್ ಹತ್ತುವಾಗ ತುಂಬಾ ಜನಜಂಗುಳಿ ಇದ್ದು ನೂಕು ನುಗ್ಗಲು ಏರ್ಪಟ್ಟಿದೆ. ಈ ಆಸಮಯದಲ್ಲಿ ಖದೀಮರು ವಿಶಾಲಾಕ್ಷಿ ಅವರ ಬ್ಯಾಗ್ ಜಿಪ್ ತೆಗೆದು ಅದರೊಳಗೆ ಇದ್ದ ಪರ್ಸ್ ಎಗರಿಸಿದ್ದಾರೆ. ಬಳಿಕ ವಿಶಾಲಾಕ್ಷಿ ತಮ್ಮ ಬ್ಯಾಗ್ ಜಿಪ್ ತೆರೆದಿರುವುದು ನೋಡಿ ಪರ್ಸ್ ಹುಡುಕಾಡಿದಾಗ ಪರ್ಸ್ ಕಳುವಾಗಿರುವುದು ತಿಳಿದುಬಂದಿದೆ.

ಪರ್ಸ್‌ನಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ 35 ಗ್ರಾಂ ತೂಕದ ಮುತ್ತಿನ ಚಿನ್ನದ ಸರ ಇಡಲಾಗಿತ್ತು. ಬಸ್ ಹತ್ತುವ ವೇಳೆಯಲ್ಲಿ ಕಳ್ಳತನ ಮಾಡಲಾಗಿದ್ದು ಪತ್ತೆ ಮಾಡಿಕೊಡಬೇಕೆಂದು ವಿಶಾಲಾಕ್ಷಿ ಅವರು ಆ.24ರಂದು ಹಾಸನ ಬಡಾವಣೆ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net