ಪರ್ಸೆಂಟೇಜ್​ ಪಡೆದಿದ್ರೆ 10 ಸಾವಿರ ಕೋಟಿ ಬರುತ್ತಿತ್ತು: ಬಿಜೆಪಿ ವಿರುದ್ಧ ಎಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ

04Tmk_Sira_Jaladhare0
Published on

ಶಿರಾ: ರಾಜ್ಯ ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್​ ಕಮಿಷನ್​ ನಡೆಯುತ್ತಿದ್ದು, ಈ ರೀತಿ ನಮ್ಮ ಸರ್ಕಾರದ ಅವಧಿಯಲ್ಲಿ 25 ಸಾವಿರ ಕೋಟಿ ರೂ., ರೈತರ ಸಾಲ ಮನ್ನ ಮಾಡುವ ಬದಲು ವಿವಿಧ ಯೋಜನೆಗಳಿಗೆ 25 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದರೆ ಪರ್ಸೆಂಟೇಜ್​ ರೂಪದಲ್ಲಿ 10 ಸಾವಿರ ಕೋಟಿ ಬರುತ್ತಿತ್ತು. ಅದೇ ಹಣದಲ್ಲಿ ಚುನಾವಣೆ ಮಾಡಬಹುದಿತ್ತು ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದ ಪ್ರೆಸಿಡೆನ್ಸಿ ಶಾಲೆಯ ಪಕ್ಕದ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್​ ಹಣ ಮಾಡುವ ಪವಲ್ಲ ಜನರ ಹಿತ ಕಾಯುವ ಪ ಎಂದು ತಿಳಿಸಿದರು.

30&40 ಸೀಟುಗಳಿಂದ ನಾನು 2 ಬಾರಿ ಮುಖ್ಯ ಮಂತ್ರಿಯಾಗಿದ್ದೇನೆ. ಸಂಪೂರ್ಣ ಬಹುಮತದಿಂದ ನಾನು ಮುಖ್ಯಮಂತ್ರಿಯಾಗಿಲ್ಲ. 75 ವರ್ಷಗಳಿಂದ ಸರ್ಕಾರ ನಡೆಸುತ್ತಿರುವ 2 ರಾಷ್ಟ್ರೀಯ ಪಗಳು ಕೊಡುಗೆ ಏನು? ಆಕಸ್ಮಿಕವಾಗಿ ಮುಖ್ಯಮಂತ್ರಿಯಾದವನು ನಾನು, ನನ್ನ ಅವಧಿಯಲ್ಲಿ ಸಾಲಮನ್ನಾ, ವೃದ್ಧಾಪ್ಯ, ಅಂಗವಿಕಲ ವೇತನ ಗಳಂತಹ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಗೆ ಜಾರಿತಂದಿದ್ದೇನೆ ಎಂದರು.

ರೈತರಿಗೆ ಸಾಗುವಳಿ ಚೀಟಿ ಕೊಡುವುದರ ಮೂಲಕ ರೈತರಿಗೆ ಬೆಂಬಲವಾಗಿ ನಿಂತವನು ನಾನು. ಆದರೆ ಕಳೆದ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಕೊಟ್ಟಂತಹ ಭರವಸೆಗಳು ಎಲ್ಲಿ ಹೋದವು? ಅವರ ಮಗ ರೆಸಾರ್ಟ್​ನಲ್ಲಿ ಕುಳಿತು ಒಟ್ಟಿಗೆ 3&4ಸಾವಿರ ರೂ.,ಗಳಂತೆ ಕೇಸರಿ ಶಲ್ಯ ಹಾಕಿಕೊಂಡು ಹಂಚಿದ ಅವರ ಹುಡುಗರು ಈಗ ಎಲ್ಲಿ ಹೋದರು ಎಂದು ಕುಮಾರಸ್ವಾಮಿ ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಹರಿಹಾಯ್ದರು.

ನಮ್ಮ ಕ್ಷೇತ್ರದ ಹಾಲಿ ಶಾಸಕರು ತಾಲೂಕಿನಲ್ಲಿ ಈವರೆಗೆ ಒಂದೇ ಒಂದು ಮನೆ ಹಂಚಿಲ್ಲ. ಕುಮಾರಸ್ವಾಮಿ ಅವರು ರೈತರ 25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾರೆ. 2023ಕ್ಕೆ ಜೆಡಿಎಸ್​ ಅಧಿಕಾರಕ್ಕೆ ಬಂದರೆ ವೃದ್ಧಾಪ್ಯ ವೇತನವನ್ನು 5 ಸಾವಿರ ರೂ.,ಗೆ ಹೆಚ್ಚಳ ಮಾಡುತ್ತಾರೆ ಎಂದು ತಾಲೂಕು ಜೆಡಿಎಸ್​ ಅಧ್ಯ ಆರ್​.ಉಗ್ರೇಶ್​ ಭರವಸೆ ನೀಡಿದರು.

ವಿಧಾನ ಪರಿಷತ್​ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ, ಮಾಜಿ ಶಾಸಕರಾದ ಸಿ.ಬಿ.ಸುರೇಶಬಾಬು, ಪಿ.ಆರ್​.ಸುಧಾಕರಲಾಲ್​, ಕೆ.ಎಂ.ತಿಮ್ಮರಾಯಪ್ಪ, ನಗರಸಭೆ ಅಧ್ಯ ಬಿ.ಅಂಜಿನಪ್ಪ, ಸದಸ್ಯ ರವಿಶಂಕರ್​, ಆರ್​.ರಾಮು, ಜಿಪಂ ಮಾಜಿ ಉಪಾಧ್ಯ ಮುದಿಮಡು ರಂಗಶಾಮಯ್ಯ, ತಾಪಂ ಮಾಜಿ ಅಧ್ಯ ಸತ್ಯಪ್ರಕಾಶ್​, ರಾಮಕೃಷ್ಣ, ಸಿ.ಆರ್​.ಉಮೇಶ್​ ಮತ್ತಿತರರು ಉಪಸ್ಥಿತರಿದ್ದರು.

ಅದ್ದೂರಿ ಸ್ವಾಗತ: ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ನಗರದ ದರ್ಗಾ ಸರ್ಕಲ್​ನಿಂದ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಕರೆತರಲಾಯಿತು. ಜನತಾ ಜಲಧಾರೆಯ ರಥವು ಮದಲೂರು ಕೆರೆಗೆ ಭೇಟಿ ನೀಡಿ ಗಂಗಾಪೂಜೆ ಸಲ್ಲಿಸಿ ನಂತರ ಮದಲೂರು ಕೆರೆಯ ನೀರು ಸಂಗ್ರಹಿಸಲಾಯಿತು.

ನನ್ನ ಮುಖ ನೋಡಿ ಮತಹಾಕಿ: ಶಿರಾ ವಿಧಾನಸಭಾ ೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಮುಖ್ಯವಲ್ಲ. ನನ್ನ ಮುಖನೋಡಿ ಮತ ಹಾಕಿ. ಸದಾ ನಿಮ್ಮ ಜತೆಗಿರುತ್ತೇನೆ. ನರೇಂದ್ರಮೋದಿ ಮುಖ ನೋಡಿ ಬಿಜೆಪಿಗೆ ಮತ ಹಾಕಿ ಗೊತ್ತುಗುರಿ ಇಲ್ಲದವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸುತ್ತೀರಾ. ಪ್ರತಿ ದಿನ ಬೆಳಗ್ಗೆ ನಿಮ್ಮ ಮನೆಯ ಹತ್ತಿರುವ ನಿಮ್ಮವರಿಗೆ ಮತ ನೀಡಿ ಎಂದು ಕುಮಾರಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net