

ಮೈಸೂರು: ಸ್ವಾತಂತ್ರೃದ ಅಮೃತ ಮಹೋತ್ಸವದ ಅಂಗವಾಗಿ ಏಳು ಪರ್ವತಾರೋಹಿಗಳ ತಂಡ ಆಫ್ರಿಕಾ ಖಂಡದ ಅತಿ ಎತ್ತರದ ಶಿಖರ ಏರಲು ತಾಂಜಾನಿಯಾ ದೇಶಕ್ಕೆ ತೆರಳಲು ಸಿದ್ಧವಾಗಿದೆ.
ನಗರದ ಟೈಗರ್ ಅಡ್ವೆಂಚರ್ಸ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿರುವ ಈ ಪರ್ವತಾರೋಹಣಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರ ಮೈಸೂರು ಅರಮನೆಯಲ್ಲಿ ತ್ರಿವರ್ಣ ಧ್ವಜ ಮತ್ತು ದಂಡಯಾತ್ರೆಯ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ತಾಂಜಾನಿಯಾದ ಕಿಲಿಮಂಜಾರೋ ರಾಷ್ಟ್ರೀಯ ಉದ್ಯಾನವನದ ಉಹುರು ಶಿಖರಕ್ಕೆ ಆ.6 ರಂದು ಬೆಂಗಳೂರಿನಿಂದ ತಂಡದ ಸದಸ್ಯರು ತೆರಳಿದ್ದಾರೆ. ಕಿನ್ಯಾದಲ್ಲಿ ಐದು ದಿನಗಳ ಉಳಿದು ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಬಳಿಕ ಆ.12ರಿಂದ ಚಾರಣ ಶುರುವಾಗಲಿದೆ. 52 ಕಿಲೋಮೀಟರ್ ಕ್ರಮಿಸಬೇಕಿರುವ ಚಾರಣವು 9 ದಿನಗಳ ಕಾಲ ನಡೆಯಲಿದೆ. ಶಿಖರ ಏರಿದ ಬಳಿಕ ಭಾರತ ಧ್ವಜವನ್ನು ಹಾರಿಸಲಾಗುತ್ತದೆ. ತಂಡದಲ್ಲಿ ಕ್ರಮವಾಗಿ ಮೈಸೂರು ಮತ್ತು ಬೆಂಗಳೂರಿನ 4 ಪುರುಷರು, 3 ಮಹಿಳಾ ಸದಸ್ಯರು ಇದ್ದಾರೆ.
19,354 ಅಡಿ ಎತ್ತರದಲ್ಲಿರುವ ಉಹುರು ಶಿಖರವು ವಿಶ್ವದ ಅತಿ ಎತ್ತರದ ಸ್ವತಂತ್ರ ಪರ್ವತವಾಗಿದೆ. ಜತೆಗೆ ಆಫ್ರಿಕಾದ ಅತಿ ಎತ್ತರದ ಪರ್ವತವಾಗಿದೆ. ನಗರದ ಡಿಎಸ್‌ಡಿ ಸೋಲಂಕಿ ನೇತೃತ್ವದಲ್ಲಿ ಪರ್ವತಾರೋಹಣ ನಡೆಯಲಿದೆ. ನಗರದ ಪುನೀತ್ ಪ್ರದೀಪ್, ಶ್ರೀಗೌರಿ, ಚೇತನಾ ಸರ್ವಿ, ಲೆನಿನ್ ಚೌಧರಿ ಮತ್ತು ಬೆಂಗಳೂರಿನ ಗಿರೀಶ್, ಉದಯ್, ಕಾರ್ತಿಕ್ ತಂಡದ ಇತರ ಸದಸ್ಯರು ಪರ್ವತ ಏರಲಿದ್ದಾರೆ.
ೆಟೋ - 5ಎಂವೈಎಸ್-7
ಪರ್ವತಾರೋಹಣಕ್ಕೆ ರಾಜವಂಶಸ್ಥ ಯದುವೀರ ಶುಕ್ರವಾರ ಸಂಜೆ ಮೈಸೂರು ಅರಮನೆಯಲ್ಲಿ ತ್ರಿವರ್ಣ ಧ್ವಜ ಮತ್ತು ದಂಡಯಾತ್ರೆಯ ಧ್ವಜವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಚಾರಣ ತಂಡದ ಸದಸ್ಯರಾದ ಡಿಎಸ್‌ಡಿ ಸೋಲಂಕಿ, ಪುನೀತ್ ಪ್ರದೀಪ್, ಶ್ರೀಗೌರಿ, ಚೇತನಾ ಸರ್ವಿ, ಲೆನಿನ್ ಚೌಧರಿ,ಬೆಂಗಳೂರಿನ ಗಿರೀಶ್ ಮತ್ತು ಉದಯ್, ಕಾರ್ತಿಕ್ ಇದ್ದರು.