

ಬಳ್ಳಾರಿ : ನಗರದ ಸುಧಾಕ್ರಾಸ್ ವೃತ್ತದಿಂದ ಓಪಿಡಿ ರಸ್ತೆಯವರೆಗೆ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪ್ರಾರಂಭಿಸಿರುವ ಹಿನ್ನೆಲೆ ಒಪಿಡಿ ವೃತ್ತದಿಂದ ಸುಧಾಕ್ರಾಸ್ ರೈಲ್ವೇ ಗೇಟ್‌ವರೆಗೆ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ತಿಳಿಸಿದ್ದಾರೆ.
ಪರ್ಯಾಯ ಮಾರ್ಗ: ನಗರದ ಎಸ್ಪಿ ವೃತ್ತದಿಂದ ಹೊಸಪೇಟೆ ರಸ್ತೆ ಕಡೆಗೆ ಹೋಗುವ ಎಲ್ಲ ವಿಧದ ವಾಹನಗಳು ಇನ್‌ಫ್ಯಾಂಟ್ರಿ ರಸ್ತೆ, ಪೋಲೋ ಹೋಟೆಲ್ ರಸ್ತೆ ಮೂಲಕ 2ನೇ ರೈಲ್ವೇಗೇಟ್, ಐ.ಟಿ.ಐ ಕಾಲೇಜು ಮುಖಾಂತರ ಹೊಸಪೇಟೆ ರಸ್ತೆ ಕಡೆ ಸಂಚರಿಸಬಹುದು.
ಶಾಲಾ/ಕಾಲೇಜು, ವೈದ್ಯಕೀಯ ಮತ್ತು ತುರ್ತು ಸೇವೆಗಳ ವಾಹನಗಳು ಮಾತ್ರ ವಿಮ್ಸ್ ನಿರ್ದೇಶಕರ ಕಚೇರಿಯ ಮುಂದಿನ ರಸ್ತೆಯ ಮೂಲಕ ಕಂಟೋನ್‌ಮೆಂಟ್ ರೈಲ್ವೇಗೇಟ್ ಮುಖಾಂತರ ಸಂಚರಿಸಬೇಕು.
ಹೊಸಪೇಟೆ ಕಡೆಯಿಂದ ನಗರಕ್ಕೆ ಆಗಮಿಸುವ ವಾಹನಗಳು ಆರ್‌ಟಿಒ ಕಚೇರಿ, ಕೌಲಬಜಾರ್ 2ನೇ ರೈಲ್ವೇ ಗೇಟ್ ಮೂಲಕ ಅಥವಾ 1ನೇ ರೈಲೈಗೇಟ್ ಮೇಲ್ಸೇತುವೆ ಮೂಲಕ ಸಂಚರಿಸಬಹುದು.
ಈ ಅಧಿಸೂಚನೆಯು ಕಾಮಗಾರಿ ಮುಕ್ತಾಯಗೊಂಡು ಸಂಚಾರ ಪ್ರಾರಂಭವಾಗುವವರೆಗೂ ಚಾಲ್ತಿಯಲ್ಲಿರುತ್ತದೆ ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.