ಪರೋಪಕಾರಿ ಸೇವಾ ಮನೋಭಾವ ಬೆಳೆಸಿಕೊಳ್ಳಿ

19sor2
ಸೊರಬದ ನವಚೇತನ ಬುದ್ಧಿಮಾಂದ್ಯ ಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಡಾ. ಜ್ಞಾನೇಶ್, ಡಾ. ನವೀನ್, ಡಾ. ದಿನಕರ್ ಇತರರಿದ್ದರು.
Published on

ಸೊರಬ: ಮಾನವ ಜನ್ಮ ಶ್ರೇಷ್ಠವಾಗಿದ್ದು, ಜೀವಿತ ಅವಯಲ್ಲಿ ಮಾಡಿದ ಶ್ರೇಷ್ಠ ಸೇವಾ ಕಾರ್ಯಗಳಿಂದ ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದು ಸೊರಬ ಮುರುಘಾಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು. ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ಧಿಮಾಂದ್ಯ ಮಕ್ಕಳ ಶಾಲೆ ವಿದ್ಯಾರ್ಥಿಗಳಿಗೆ ಸ್ಪಂದನ ಹೆಲ್ತ್ ೌಂಡೇಷನ್ ಟ್ರಸ್ಟ್‌ನಿಂದ ಶುಕ್ರವಾರ ಆಯೋಜಿಸಿದ್ದ ಸಮವಸ್ತ್ರ ವಿತರಣಾ ಕಾರ್ಯಕ್ರಮವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಗತ್ತಿನಲ್ಲಿ ಮನುಷ್ಯ ಬದುಕಲು ಭಗವಂತ ಎಲ್ಲ ಸವಲತ್ತು ಕಲ್ಪಿಸಿದ್ದು, ಸಕಲ ಜೀವಸಂಕುಲಗಳಲ್ಲಿ ಮನುಷ್ಯ ಶ್ರೇಷ್ಠ ಜೀವಿ. ಮನುಷ್ಯ ಧರ್ಮನಿಷ್ಠನಾಗಿರಬೇಕು. ಹಸಿವು, ನೋವು, ಸಂಕಷ್ಟ ಗಳಲ್ಲಿ ಬಳಲುತ್ತಿರುವವರಿಗೆ ಹಾಗೂ ಅನಾಥರನ್ನು ಸಂತೈಸುವ ಮೂಲಕ ಪರೋಪಕಾರಿ ಸೇವೆ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬದುಕಿನಲ್ಲಿ ನಾವು ಮೋಕ್ಷ ಸಂಪಾದನೆ ಮಾಡಬೇಕಾದರೆ ಪುಣ್ಯದ ಕೆಲಸ ಮಾಡಬೇಕು. ಸಮಾಜ ಸೇವೆಯಿಂದ ಪುಣ್ಯ ಲಭಿಸುತ್ತದೆ. ಪರರಿಗೆ ಉಪಕಾರ ಮಾಡಿದಾಗ ಸಮಾಜಕ್ಕೆ ನಾವು ಸಮರ್ಪಣೆ ಮಾಡಿಕೊಂಡಂತೆ. ಮನುಷ್ಯ ತನ್ನಲ್ಲಿರುವ ಕಲ್ಮಶಗಳನ್ನು ಹೊರಹಾಕಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು. ರೋಟರಿ ಕ್ಲಬ್ ಸೊರಬದ ಅಧ್ಯಕ್ಷ ಜೆ.ಎಸ್.ಮಹಾಂತೇಶ ಮಾತನಾಡಿ, ರೋಟರಿ ಸಂಸ್ಥೆ ನವಚೇತನ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಲು ಸಿದ್ಧವಿದೆ. ಸೇವೆಯೇ ನಮ್ಮ ಸಂಸ್ಥೆ ಮುಖ್ಯಧ್ಯೇಯ ಎಂದು ತಿಳಿಸಿದರು. ಡಾ. ನವೀನ್, ಡಾ. ದಿನಕರ್, ನವಚೇತನ ಬುದ್ಧಿಮಾಂದ್ಯ ಮಕ್ಕಳ ಶಾಲೆ ಕಾರ್ಯದರ್ಶಿ ರಾಮಪ್ಪ, ಸ್ಪಂದನ ಹೆಲ್ತ್ ೌಂಡೇಷನ್ ಟ್ರಸ್ಟ್ ಮಂಜುನಾಥ್ ಅಪ್ಪಾಜಿ, ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ರೆಡ್‌ಕ್ರಾಸ್ ಸಂಸ್ಥೆಯ ಶೃತಿ, ಮುಖ್ಯಶಿಕ್ಷಕ ರವಿಚಂದ್ರ, ಪುಟ್ಟರಾಜು, ಶಿಕ್ಷಕಿಯರಾದ ಗಾಯಿತ್ರಿ, ಪಲ್ಲವಿ, ಮಂಗಳಾ, ಸುವರ್ಣಾ, ರೋಟರಿ ಸಂಸ್ಥೆ ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ಸದಸ್ಯರಾದ ಶಿವಕುಮಾರ್, ಯಶೋಧರ, ಮಾಲತೇಶ್, ಪುನೀತ್, ಶಿವಾನಂದ, ಪರಶುರಾಮ್ ಇತರರಿದ್ದರು.

ಸೇವಾ ಮನೋಭಾವ ಹೊಂದಿರುವ ರೋಟರಿ ಸಂಸ್ಥೆಯ ಮುಖ್ಯಧ್ಯೇಯ ಸಮಾಜಮುಖಿ ಚಿಂತನೆ. ಸಮಾಜದಲ್ಲಿ ನಾವು ಮಾಡುವ ಸೇವಾ ಕಾರ್ಯಗಳು ಮನಃಪೂರ್ವಕವಾಗಿ ಇರಬೇಕು. ಇಂತಹ ಶಾಲೆಗಳಲ್ಲಿ ಜನ್ಮದಿನ ಆಚರಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಮುಂದಾದಾಗ ಇನ್ನೊಬ್ಬರಿಗೆ ಪ್ರೇರಣೆಯಾಗುತ್ತದೆ. ಡಾ. ಜ್ಞಾನೇಶ್, ದಂತ ವೈದ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net