

ಹುಬ್ಬಳ್ಳಿ: ಶ್ರೀ ಸದ್ಗುರು ಸಿದ್ಧೇಶ್ವರ ಸ್ವಾಮೀಜಿ 163ನೆಯ ಜನ್ಮದಿನ ನಿಮಿತ್ತ ಇಲ್ಲಿನ ಪಿ.ಬಿ. ರಸ್ತೆಯ ಉಣಕಲ್ನ ಹೊಸಮಠದಲ್ಲಿ ಮಂಗಳವಾರ ಅದ್ದೂರಿಯಾಗಿ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಸಾನ್ನಿಧ್ಯ ವಹಿಸಿದ್ದ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಉಣಕಲ್ ಗ್ರಾಮದ ಜನತೆ ಬಹಳ ಪುಣ್ಯವಂತರು. ಸಿದ್ದಪ್ಪಜ್ಜನವರು ‘ಉಣ್ಣಲೆ ಉಣಕಲ್ಲು’ ಎಂದು ಆಶೀರ್ವಾದ ಮಾಡಿದ್ದಾರೆ. ಆದ್ದರಿಂದ ಉಣಕಲ್ಲ ಗ್ರಾಮಸ್ಥರಿಗೆ ಎಂದಿಗೂ ಅನ್ನದ ಬಡತನ ಇರುವುದಿಲ್ಲ. ತನು, ಮನ ಹಾಗೂ ಬುದ್ಧಿಯನ್ನು ಯಾವಾಗಲೂ ಸ್ವಚ್ಛಂದವಾಗಿ ಇಟ್ಟುಕೊಳ್ಳಿ. ಪರೋಪಕಾರಿ ಜೀವನ ನಡೆಸಿ ಎಂದು ಸಲಹೆ ನೀಡಿದರು. ಮುತೆôದೆಯರಿಗೆ ಉಡಿ ತುಂಬಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು.
ಟ್ರಸ್ಟ್ ಕಮಿಟಿ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ರಾಮಣ್ಣ ಪದ್ಮಣ್ಣವರ, ಅಡಿವೆಪ್ಪ ಮೆಣಸಿನಕಾಯಿ, ಶಿವಾಜಿ ಕನ್ನಿಕೊಪ್ಪ, ಅಪ್ಪಣ್ಣ ನಾಡಿಗೇರ, ಮಹಾದೇವಪ್ಪ ಮೆಣಸಿನಕಾಯಿ, ಹುಲಿಗೆಮ್ಮ ಟೀಚರ್, ಸುಧಾ ಕೊರವಿ, ಗುರುರಾಜ್ ಸೂರ್ಯವಂಶಿ, ಶಿವಣ್ಣ ಶಿರಗುಪ್ಪಿ ಇತರರು ಇದ್ದರು.