ಪರೀಕ್ಷೆಯಿಂದ ವಿದ್ಯಾರ್ಥಿಗಳು ಹೊರಗುಳಿದರೆ ಶಿಕ್ಷಕರೇ ಹೊಣೆ ; ಸಚಿವ ಜೆ.ಸಿ.ಮಾಧುಸ್ವಾಮಿ

20 CN HALLI 1
Published on

ಚಿಕ್ಕನಾಯಕನಹಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ಣ ಜವಾಬ್ದಾರಿ ಶಿಕ್ಷಕರೇ ವಹಿಸಬೇಕು, ಪಾಲಕರು ನೆಪ ಹೇಳಿ ವಿದ್ಯಾರ್ಥಿಗಳಿಗೆ ತೊಂದರೆ ಮಾಡಬೇಡಿ, ಶಿಕ್ಷಕರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜೆ.ಸಿ.ಮಧುಸ್ವಾಮಿ ತಿಳಿಸಿದರು.

ಬಿಆರ್‌ಸಿ ಸಭಾಂಗಣದಲ್ಲಿ ಶನಿವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಯಾರಿ ಬಗ್ಗೆ ಶಿಕ್ಷಕರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆಗೆ ಸಿದ್ಧವಾದ ಮಕ್ಕಳು ಯಾರೂ ಪರೀಕ್ಷೆಯಿಂದ ಹೊರಗುಳಿಯಬಾರದು, ಮಕ್ಕಳ ಅನುಕೂಲಕ್ಕಾಗಿ ಜಿಲ್ಲಾಡಳಿತ ಬಸ್ ವ್ಯವಸ್ಥೆ ಕಲ್ಪಿಸಲಿದೆ, ಸಂಪರ್ಕದ ವ್ಯವಸ್ಥೆ ಬಗ್ಗೆ ತೊಂದರೆಯಾದರೆ ತಹಸೀಲ್ದಾರ್, ಇಒಗೆ ಅವರನ್ನು ಸಂಪರ್ಕಿಸಿ, ಸಂಪರ್ಕದ ವ್ಯವಸ್ಥೆಯಿಲ್ಲ ಎಂದು ಮಕ್ಕಳು ಪರೀಕ್ಷೆಯಿಂದ ಹೊರಗುಳಿದರೆ ಶಿಕ್ಷಕರೇ ಜವಾಬ್ದಾರರಾಗುತ್ತೀರಾ ಎಂದು ಎಚ್ಚರಿಸಿದರು.

ಪರೀಕ್ಷಾ ಕೇಂದ್ರದ ಬಳಿ ಬರುತ್ತಿದ್ದಂತೆ ನೋಂದಣಿ ಜಾಗವೆಲ್ಲಿ ಎಂದು ಮಕ್ಕಳೇ ಹುಡುಕುವುದಕ್ಕಿಂತ ಶಿಕ್ಷಕರು ಮುಂದೆ ನಿಂತು ನಂಬರ್ ಹಾಕಿರುವ ಕೊಠಡಿಯೊಳಕ್ಕೆ ನೇರವಾಗಿ ಹೋಗುವಂತೆ ನೋಡಿಕೊಳ್ಳಬೇಕು ಎಂದರು.

ಕರೊನಾ ಸೀಲ್‌ಡೌನ್ ಆಗಿರುವ ಕೇಂದ್ರದಿಂದ ಪರೀಕ್ಷೆ ಬರೆಯಲು ಮಕ್ಕಳು ಬಂದರೆ ಅವರನ್ನು ಪರೀಕ್ಷಾ ಕೇಂದ್ರದಿಂದ ಬೇರೆ ವ್ಯವಸ್ಥೆ ಮಾಡಿ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿ, ಒಂದು ವೇಳೆ ಪರೀಕ್ಷೆ ಬರೆಯುವ ಮಕ್ಕಳಿಗೆ ಕರೊನಾ ಪಾಸಿಟಿವ್ ಬಂದಲ್ಲಿ ಅವರಿಗೆ ಸಪ್ಲಿಮೆಂಟರಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಬಿಸಿನೀರು ತರುವಂತೆ, ಮಾಸ್ಕ್ ಧರಿಸುವಂತೆ ಶಿಕ್ಷಕರು ಮಕ್ಕಳಿಗೆ ಸೂಚನೆ ನೀಡಬೇಕು, ಒಂದು ಕೊಠಡಿಯೊಳಗೆ 18 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net