ಪರೀಕ್ಷೆ ಬರೆದ ಏಕೈಕ ವಿದ್ಯಾರ್ಥಿ

jpg
Published on

ಭಾಲ್ಕಿ: ತಾಲೂಕಿನ 15 ಕೇಂದ್ರಗಳ ಪೈಕಿ ಕಣಜಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಒಬ್ಬನೇ ವಿದ್ಯಾರ್ಥಿ ಶುಕ್ರವಾರ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಬರೆದು ಗಮನ ಸೆಳೆದಿದ್ದಾನೆ. ಕರೊನಾ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, ಶುಕ್ರವಾರ ನಡೆದ ಅರ್ಥಶಾಸ್ತ್ರ ಪರೀಕ್ಷೆಯನ್ನು ಈ ಕೇಂದ್ರದಲ್ಲಿ ಒಬ್ಬನೇ ಬರೆದಿದ್ದಾನೆ. ಈತನಿಗಾಗಿ ಇಡೀ ಶಿಕ್ಷಣ ಇಲಾಖೆ, ತಾಲೂಕು ಆಡಳಿತ ಸಕಲ ಸೌಲಭ್ಯ ಒದಗಿಸಿತು. ಬೆಳಗ್ಗೆ 7ಕ್ಕೆ ಉಪ ಖಜಾನೆ ಅಧಿಕಾರಿ ಪ್ರಶ್ನೆ ಪತ್ರಿಕೆ ಬಂಡಲ್ ಮಾರ್ಗಾಧಿಕಾರಿಗಳ ಮೂಲಕ ರವಾನಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜತೆ ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕ, ಪ್ರಶ್ನೆಪತ್ರಿಕೆ ಪಾಲಕ, ಸ್ಥಾನಿಕ ಜಾಗೃತದಳ ಅಧಿಕಾರಿ, ನೋಡಲ್ ಅಧಿಕಾರಿ, ಕೊಠಡಿ ಮೇಲ್ವಿಚಾರಕ ಸೇರಿ ಎಲ್ಲ ಅಧಿಕಾರಿಗಳು ಒಬ್ಬ ವಿದ್ಯಾರ್ಥಿಗಾಗಿ ಪರೀಕ್ಷೆ ಮುಗಿಯುವವರೆಗೆ ಕಾರ್ಯೋನ್ಮುಖರಾಗಿದ್ದರು.

ಭಾಲ್ಕಿ ತಾಲೂಕಿನಲ್ಲಿ ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಲ್ಲದಿದ್ದರೂ ಬೇರೆ ಜಿಲ್ಲೆಯ ಒಬ್ಬ ವಿದ್ಯಾರ್ಥಿತಾಲೂಕಿನ ಪರೀಕ್ಷಾ ಕೇಂದ್ರಕ್ಕೆ ಮೈಗ್ರೇಟ್ ಆಗಿದ್ದರಿಂದ ಪರೀಕ್ಷೆ ನಡೆಸುವುದು ನಮ್ಮ ಜವಾಬ್ದಾರಿ ಆಗಿತ್ತು.
| ಸಿದ್ದವೀರಯ್ಯ ರುದನೂರ ಬಿಇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net