

ಚಿತ್ರದುರ್ಗ: ಮಕ್ಕಳಲ್ಲಿ ಪರೀಕ್ಷಾ ಒತ್ತಡ ಕಡಿಮೆ ಮಾಡಲು ಪರೀಕ್ಷಾ ಪೇ ಚರ್ಚಾ ಸಹಕಾರಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ನೋಂದಣಿಗೆ ಶಿಕ್ಷಣ ಇಲಾಖೆ, ಡಯಟ್ ಅಧಿಕಾರಿಗಳು ಸಂಬಂಧಿಸಿದ ಶೈಕ್ಷಣಿಕ ಅನುಷ್ಠಾನಾಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ ಒಂದಾದ ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಿಸಲು ಜ.14 ರವರೆಗೆ ಅವಕಾಶವಿದೆ. 2024ರ ಡಿ. 14 ರಿಂದ ನೋಂದಣಿ ಆರಂಭವಾಗಿದೆ. ರಾಜ್ಯದಲ್ಲಿ ಜ.6 ಕ್ಕೆ ಅಂತ್ಯಗೊಂಡಂತೆ 6 ರಿಂದ 12ನೇ ತರಗತಿವರೆಗೆ 67675 ವಿದ್ಯಾರ್ಥಿಗಳು, 8582 ಶಿಕ್ಷಕರು ಹಾಗೂ 3009 ಪಾಲಕರ ನೋಂದಣಿಯಾಗಿದೆ.
ಜನವರಿ ಕೊನೆ ವಾರದಲ್ಲಿ ರಾಷ್ಟ್ರೀಯ ಮಟ್ಟದ ಪರೀಕ್ಷಾ ಪೇ ಚರ್ಚಾದ 8 ನೇ ಆವೃತ್ತಿ ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ವಿದ್ಯಾರ್ಥಿ, ಶಿಕ್ಷಕರು ಹಾಗೂ ಪಾಲಕರೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ.
ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಠಿಠಿ// ಜ್ಞ್ಞಿಟಠಿಛಿಜ್ಞಿಜಿ1. ಞಜಟ.ಜ್ಞಿ/2025 ವೆಬ್‌ಸೈಟ್‌ನಲ್ಲಿ ನೋಂದಾಯಿಸಬಹುದು. ಭಾಗವಹಿಸಿದ ಎಲ್ಲರಿಗೂ ಎನ್‌ಸಿಇಆರ್‌ಟಿ ಪ್ರಮಾಣ ಪತ್ರ ದೊರೆಯಲಿದೆ. ಬಹು ಆಯ್ಕೆ ಮಾದರಿ ಪ್ರಶ್ನೆಗಳಿಗೆ ಉತ್ತರಿಸಿ ವಿಜೇತರಾಗುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರೊಂದಿಗೆ ಆನ್‌ಲೈನ್ ಮೂಲಕ ಪ್ರಧಾನಿ ಸಂವಹನ ನಡೆಸಲಿದ್ದಾರೆ.
ಯಾವ ಜಿಲ್ಲೆ, ಎಷ್ಟು ನೋಂದಣಿ?(ಜ.6ಕ್ಕೆ ಅಂತ್ಯಗೊಂಡಂತೆ)
ಜಿಲ್ಲೆ- ವಿದ್ಯಾರ್ಥಿಗಳು- ಶಿಕ್ಷಕರು- ಪಾಲಕರು
ಬಾಗಲಕೋಟೆ 2111 - 340 - 24
ಬಳ್ಳಾರಿ-2002-140-41
ಬೆಳಗಾವಿ-5161-891-183
ಬೆಂ. ಗ್ರಾಮಾಂತರ-3268-511-215
ಬೆಂ. ನಗರ-17686-2071-995
ಬೀದರ್-627-93-19
ಚಾಮರಾಜನಗರ-2116-282-41
ಚಿಕ್ಕಬಳ್ಳಾಪುರ-1270-115-38
ಚಿಕ್ಕಮಗಳೂರು-508-206-39
ಚಿತ್ರದುರ್ಗ-2114-105-6.
ದಕ್ಷಿಣ ಕನ್ನಡ-2567-510-114
ದಾವಣಗೆರೆ-2057-335-107
ಧಾರವಾಡ-2091-139-125
ಗದಗ-1495-195-25
ಹಾಸನ-1585-164-85
ಹಾವೇರಿ-1704-145-33
ಕಲಬುರಗಿ-703-52-16
ಕೊಡಗು-2138-241-60
ಕೋಲಾರ-1566-84-159
ಕೊಪ್ಪಳ-400-51-5
ಮಂಡ್ಯ-1091-120-120
ಮೈಸೂರು-3188-380-208
ರಾಯಚೂರು-1038-156-25
ರಾಮನಗರ-894-64-29
ಶಿವಮೊಗ್ಗ- 997-193-62
ತುಮಕೂರು-1423-289-18
ಉಡುಪಿ-2082-250-47
ಉತ್ತರ ಕನ್ನಡ-1732-221-145
ವಿಜಯನಗರ-408-69-4
ವಿಜಯಪುರ-1039-100-14
ಯಾದಗಿರಿ -614- 70 - 7
===
ನೋಂದಣಿ ಹೆಚ್ಚಿಸಬೇಕು
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಯಶಸ್ಸಿಗೆ ನಮ್ಮ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಶಿಕ್ಷಕರು ಹಾಗೂ ಪಾಲಕರ ನೋಂದಣಿಗೆ ಜಿಲ್ಲಾ, ತಾಲೂಕು ಮಟ್ಟದ ಶೈಕ್ಷಣಿಕ ಅನುಷ್ಠಾನಾಧಿಕಾರಿಗಳು, ಮುಖ್ಯಶಿಕ್ಷಕರು ಮತ್ತು ಶಿಕ್ಷಕರಿಗೆ ಮಾರ್ಗದರ್ಶನ ನೀಡಬೇಕು.
ಎಂ. ನಾಸಿರುದ್ದೀನ್, ಡಯಟ್ ಪ್ರಾಚಾರ್ಯ, ಚಿತ್ರದುರ್ಗ.