ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

h22-Protest
Published on

ಹುಬ್ಬಳ್ಳಿ: ಚಿತ್ರಕಲೆ, ಗುಡಿ ಕೈಗಾರಿಕೆ, ಮಣ್ಣಿನ ಮೂರ್ತಿ ತಯಾರಿ ಇತ್ಯಾದಿ ಕುಲಕಸಬು ಮಾಡಿಕೊಂಡಿರುವ ಸೋಮವಂಶ ಆರ್ಯ ಕ್ಷತ್ರಿಯ, ಚಿತ್ರಗಾರ ಜನಾಂಗದವರಿಗೆ ಗಣಪತಿ ಉತ್ಸವದ ಬಗ್ಗೆ ಸೂಕ್ತ ಮಾರ್ಗದರ್ಶನ ಹಾಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ತಹಸೀಲ್ದಾರ್ ಕಚೇರಿ ಎದುರು ಬ್ಯಾನರ್ ಹಿಡಿದು ಕೆಲಕಾಲ ಪ್ರತಿಭಟನೆ ನಡೆಸಿದ ಒಕ್ಕೂಟದ ಪದಾಧಿಕಾರಿಗಳು, ರಾಜ್ಯದ ವಿವಿಧೆಡೆಯಲ್ಲಿ ನೆಲೆಸಿರುವ ಜನಾಂಗದವರು ಚಿತ್ರಕಲೆಯನ್ನೇ ಬದುಕಾಗಿ ಸ್ವೀಕರಿಸಿದ್ದಾರೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಮೂರ್ತಿಗಳನ್ನು ತಯಾರಿಸುತ್ತಾರೆ. ಆದರೆ, ಅವರಿಗೆ ಸೂಕ್ತ ಮಾರ್ಗದರ್ಶನವನ್ನು ಸರ್ಕಾರ ನೀಡುತ್ತಿಲ್ಲ ಎಂದು ದೂರಿದರು.

ಲಾಕ್​ಡೌನ್​ನಿಂದ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಜೀವನೋಪಾಯಕ್ಕೆ ಕುಲಕಸುಬುಗಳನ್ನು ಮಾಡಿಕೊಂಡಿದ್ದಾರೆ. ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಒಂದಿಷ್ಟು ಪರಿಹಾರಗಳನ್ನು ನೀಡಬೇಕು ಎಂದು ತಹಸೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಹನಮಂತಸಾ ನಿರಂಜನ, ಪ್ರಕಾಶ ಬುರಬುರೆ, ರಾಘವೇಂದ್ರ ಮುರಗೋಡ, ಆನಂದ ಬದ್ದಿ, ರವೀಂದ್ರ ಕಟಾವಕರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net