ಪರಿಹಾರಕ್ಕಾಗಿ ಮಗನಿಂದಲೇ ತಂದೆ ಹತ್ಯೆ

Shivanappa
Published on

ರಾಯಚೂರು: ಭೂ ಸ್ವಾೀನ ಪರಿಹಾರದ ಹಣಕ್ಕಾಗಿ ಮಗನೊಬ್ಬರ ತಂದೆಯನ್ನು ಹತ್ಯೆಗೈದು ಮಣ್ಣಿನಲ್ಲಿ ಹೂತು ಹಾಕಿ ತಂದೆ ಕಾಣೆಯಾಗಿದ್ದಾನೆ ಎಂದು ನಾಟಕವಾಡಿದ ಘಟನೆ ತಾಲೂಕಿನ ವಡ್ಲೂರು ಗ್ರಾಮದಲ್ಲಿ ನಡೆದಿದೆ.
ತಂದೆ ಶಿವನಪ್ಪ (70)ನನ್ನು ಪುತ್ರ ಈರಣ್ಣ ಕೊಲೆ ಆರೋಪಿಯಾಗಿದ್ದಾರೆ. ತಂದೆ ಹೆಸರಿನಲ್ಲಿದ್ದ ಜಮೀನು ಭಾರತ ಮಾಲಾ ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾೀನ ಪಡಿಸಿಕೊಳ್ಳಲಾಗಿದ್ದು, ಲಕ್ಷಾಂತರ ರೂ. ಪರಿಹಾರ ಬಂದಿದೆ. ಪರಿಹಾರದ ಹಣಕ್ಕಾಗಿ ತಂದೆ ಮಗನ ಮಧ್ಯೆ ಹಲವು ದಿನಗಳಿಂದ ವಾಗ್ವಾದ ನಡೆದಿತ್ತು.
15 ದಿನಗಳ ಕೆಳಗೆ ತಂದೆ ಶಿವನಪ್ಪನನ್ನು ಕೊಲೆ ಮಾಡಿ ಮಣ್ಣಿನಲ್ಲಿ ಹೂತು ಹಾಕಿದ್ದ ಈರಣ್ಣ, ಪೊಲೀಸ್ ಠಾಣೆಗೆ ಹೋಗಿ ತಂದೆ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದ. ಶಿವನಪ್ಪ ಕಾಣೆಯಾದ ಬಗ್ಗೆ ಸಂಬಂಕರು ಹಾಗೂ ಗ್ರಾಮಸ್ಥರಿಗೆ ಅನುಮಾನ ಬಂದು ಈರಣ್ಣನನ್ನು ವಿಚಾರಣೆ ನಡೆಸಿದ್ದಾರೆ.
ಸಂಬಂಕರು ಠಾಣೆಗೆ ದೂರು ನೀಡುವುದಾಗಿ ಹೇಳಿದ್ದರಿಂದ ಈರಣ್ಣ ಪೊಲೀಸ್ ಠಾಣೆಗೆ ಬಂದು ಶರಣಾಗಿ, ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net