

ಸೇಡಂ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಬಹುತೇಕ ಕಡೆ ಹಾನಿಗಳಾಗಿದ್ದು, ಹೆಸರು, ಉದ್ದು, ತೊಗರಿ ಸೇರಿ ಸುಮಾರು 32958 ಹೆಕ್ಟೇರ್ನಲ್ಲಿ ಬಿತ್ತನೆಗೊಂಡ ಬೆಳೆ ನಷ್ಟವಾಗಿದ್ದು, ವರದಿ ತಯಾರಿಸಿ ಸಕರ್ಾರಕ್ಕೆ ಸಲ್ಲಿಸಲಾಗಿದೆ ಎಂದು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ತಿಳಿಸಿದರು.
ಮಳೆಯಿಂದ ಹಾನಿಗೊಳಗಾದ ತಾಲೂಕಿನ ಮುಧೋಳ, ಸಿಂಧನಮಡು, ಗಡ್ಡಿಮಿದ ತಾಂಡ, ಕೋಡ್ಲಾ, ಬೆನಕನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ 39 ಮನೆಗಳು ಉರುಳಿ ಬಿದ್ದರೆ, 21ಮನೆಗಳಿಗೆ ನೀರು ಹೊಕ್ಕಿದವು. ನೀರಿನಲ್ಲಿ ಮುಳುಗಿ ಎತ್ತು ಸಾವನ್ನಪ್ಪಿತ್ತು. ಇವರೆಲ್ಲರಿಗೂ ಪರಿಹಾರ ನೀಡಲಾಗಿದ್ದು, ಅವರ ಖಾತೆ ನೇರವಾಗಿ ಜಮಾ ಮಾಡಲಾಗಿದೆ. ಹೆಸರು, ಉದ್ಧು 14150 ಹೆಕ್ಟೇರ್ ಹಾನಿಯಾಗಿತ್ತು. ಸೆಪ್ಟೆಂಬರ್ನಲ್ಲಿ ಸುರಿದ ಮಳೆಗೆ 18800 ಹೆಕ್ಟೇರ್ ಬೆಳೆ ನಾಶವಾದರೆ, 96 ಮನೆಗಳು ನೆಲಕ್ಕುರುಳಿವೆ. ಸುಮಾರು 1330 ಮನೆಗಳಿಗೆ ನೀರು ಹೊಕ್ಕು ದಿನಬಳಕೆ ವಸ್ತುಗಳು ನೀರು ಪಾಲಾಗಿವೆ ಎಂದಿದ್ದಾರೆ. ಇವರಿಗೂ ಶೀಘ್ರದಲ್ಲಿ ಪರಿಹಾರ ಜಮಾ ಮಾಡಲಾಗುವದು. ಈಗಾಗಲೇ ಆಯಾ ಗ್ರಾಮದ ಗ್ರಾಮ ಲೇಖಪಾಲಕರು ಹಾನಿಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಿಜವಾಗಿಯೂ ನಷ್ಟ ಅನುಭವಿಸಿದವರಿಗೆ ಪರಿಹಾರ ಸಿಗಲಿದ್ದು, ಸುಳ್ಳು ದಾಖಲೆಗಳಿಗೆ ಆಸ್ಪದ ನೀಡುವದಿಲ್ಲ ಎಂದು ಎಚ್ಚರಿಸಿದರು.
ಉಪ ತಹಸೀಲ್ದಾರ್ ಅಣವೀರಪ್ಪ, ಕಂದಾಯ ನಿರೀಕ್ಷಕ ಸತ್ಯನಾರಾಯಣ, ಗ್ರಾಮಲೇಖಪಾಲಕ ವೆಂಕಟಪ್ಪ, ಪ್ರವೀಣ ಇದ್ದರು.
ಆಗಸ್ಟ್ನಲ್ಲಿ ಮಳೆ ಬಂದಾಗಲೇ ಬಹುತೇಕ ಬೆಳೆ ಹಾನಿಯಾಗಿತ್ತು. ಈ ಕುರಿತು ಸಕರ್ಾರಕ್ಕೆ ವರದಿ ಸಲ್ಲಿಸಲಾಗಿತ್ತು. ಅತಿವೃಷ್ಟಿ ಪೀಡಿತ ತಾಲೂಕಿನ ಪಟ್ಟಿಯಲ್ಲಿ ಸೇಡಂ ಸೇರಿದ್ದು, ರೈತರಿಗೆ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವದು.
| ಬಸವರಾಜ ಬೆಣ್ಣೆಶಿರೂರ ತಹಸೀಲ್ದಾರ್
ಸೇಡಂ