ಪರಿಹಾರ ನೀಡಲು ಬೆಳೆ ನಷ್ಟ ಸರ್ವೇ

photo tgl 3(16.5.2020) horticulture officer visit
Published on

ತ್ಯಾಮಗೊಂಡ್ಲು: ಲಾಕ್‌ಡೌನ್‌ನಿಂದಾಗಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರದಿಂದ ತಾತ್ಕಾಲಿಕ ಪರಿಹಾರ ಘೋಷಣೆ ಆಗಿರುವ ಹಿನ್ನೆಲೆ ತಾಲೂಕು ತೋಟಗಾರಿಕಾ ಇಲಾಖೆ ನಿರ್ದೇಶಕ ಜಿ.ವಿ.ಸುಬ್ರಹ್ಮಣ್ಯ ಶುಕ್ರವಾರ ಸಂಜೆ ಹೋಬಳಿಯ ತಿಪ್ಪಶೆಟ್ಟಿಹಳ್ಳಿ ಮತ್ತು ತಾವರೆಕೆರೆ ಗ್ರಾಮದ ತೋಟಗಳಿಗೆ ಭೇಟಿ ನೀಡಿ ಸರ್ವೇ ನಡೆಸಿದರು.

ಹೂವಿನ ಬೆಳೆಗಾರರಿಗೆ ಗರಿಷ್ಠ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ಮೀರದಂತೆ ಹೂವು ಬೆಳೆಯ ವಿಸ್ತೀರ್ಣ ಆಧರಿಸಿ ಸಹಾಯ ಧನವನ್ನು ವಿತರಿಸಲಾಗುವುದು, ಹಣ್ಣು ಮತ್ತು ತರಕಾರಿ ಬೆಳೆದು ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಫಲಾನುಭವಿಗೆ ಗರಿಷ್ಠ 1 ಹೆಕ್ಟೇರ್ ಪ್ರದೇಶಕ್ಕೆ 15 ಸಾವಿರ ರೂ. ಮೀರದಂತೆ ಸಹಾಯ ಧನ ಘೋಷಣೆಯಾಗಿದೆ. ಮಾರ್ಗಸೂಚಿ ಬಂದ ನಂತರ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿ.ವಿ.ಸುಬ್ರಹ್ಮಣ್ಯ ಹೇಳಿದರು.

ಪಟ್ಟಿಯಲ್ಲಿ ಹೆಸರಿಲ್ಲದ ರೈತರು ಲಾಖ್‌ಡೌನ್ ಅವಧಿಯಲ್ಲಿ ಹೂವು ಬೆಳೆದು ಮಾರಾಟವಾಗದೆ ನಷ್ಟ ಅನುಭವಿಸಿದ ಬಗ್ಗೆ ಸ್ವಯಂೋಷಿತ ಪತ್ರದೊಂದಿಗೆ, ಪಹಣಿ, ನಿಗದಿತ ಅರ್ಜಿ ನಮೂನೆ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ಪ್ರತಿ ಜೆರಾಕ್ಸ್ ನೊಂದಿಗೆ ನೆಲಮಂಗಲದಲ್ಲಿನ ತೋಟಗಾರಿಕಾ ಇಲಾಖೆ ಕಾರ್ಯಾಲಯ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net