ಪರಿಸರದ ಸ್ವಚ್ಛತೆಯಿಂದ ಕೀಟಜನ್ಯ ರೋಗಗಳ ನಿಯಂತ್ರಣ ಸಾಧ್ಯ

CTD 23 DENGI--09
Published on

ಚಿತ್ರದುರ್ಗ: ರೋಗ ಬಂದಾಗ ತೊಂದರೆ ಅನುಭವಿಸುವ ಬದಲು ರೋಗಗಳನ್ನು ನಿಯಂತ್ರಿಸಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳ ಬೇಕಾದ ಅ ಗತ್ಯವಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು.
ಜಿಲ್ಲಾಡಳಿತ,ಜಿಪಂ ಹಾಗೂ ಆರೋಗ್ಯ ಇಲಾಖೆಯಿಂದ ಬುದ್ಧ ನಗರದ ಆರೋಗ್ಯಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಡೆಂಘೀ ವಿರುದ್ಧದ ಜಾಗೃತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಈ ರಥ ಜಿಲ್ಲೆಯ 189 ಗ್ರಾಪಂಗಳಿಗೆ ತೆರಳಿ ಗ್ರಾಮೀಣರಲ್ಲಿ ಕೀಟಜನ್ಯ ರೋಗಗಳ ನಿಯ ಂತ್ರಣದ ಕುರಿತು ಜಾಗೃತಿ ಮೂಡಿಸಲಿದೆ. ಜನರು ತಮ್ಮ ಸುತ್ತಮುತ್ತಲ ಪರಿಸರದ ಸ್ವಚ್ಛತೆ ಕಾಯ್ದುಕೊಳ್ಳುವ ಮೂಲಕ ಕೀಟಜನ್ಯ ರೋಗಗಳ ಹ ರಡುವುದನ್ನು ತಡೆಗಟ್ಟಬಹುದಾಗಿದೆ ಎಂದರು.
ಡಿಎಚ್‌ಒ ಡಾ.ಆರ್.ರಂಗನಾಥ್ ಮಾತನಾಡಿ,ನಿಂತ ನೀರು,ಸೊಳ್ಳೆಗಳ ಉತ್ಪತ್ತಿಯ ತಾಣಗಳಾಗುತ್ತವೆ. ನೀರು ಶೇಖರಣೆಯ ಪರಿಕರಗಳು, ಚ ರಂಡಿ,ಹೊಂಡ ಮೊದಲಾದ ಸ್ಥಳಗಳು ಸೊಳ್ಳೆ ಉತ್ಪತ್ತಿ ತಾಣಗಳಾಗದಂತೆ ಎಚ್ಚರ ವಹಿಸಬೇಕು. 45 ದಿನಗಳ ಕಾಲ ಈ ರಥ ಜಿಲ್ಲೆಯ ಗ್ರಾಪಂಗ ಳಲ್ಲಿ ಸಂಚರಿಸಲಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 442ಕ್ಕೂ ಹೆಚ್ಚು ಡೆಂಘೀ ರೋಗದ ಪ್ರಕರಣಗಳು ವರದಿಯಾಗಿದ್ದವು,ಈ ವರ್ಷ ಈವರೆಗೆ 123 ಪ್ರಕರಣಗಳು ವರದಿಯಾಗಿವೆ ಎಂದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶಿ,ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್,ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ,ಆಶಾ ಹಾಗೂ ಅಂಗನವಾಡಿ ಕಾರ‌್ಯಕರ್ತೆ ಯರು ಇದ್ದರು.

(ಸಿಟಿಡಿ 23 ಡೆಂಘೀ)
ಚಿತ್ರದುರ್ಗದ ಬುದ್ಧನಗರದಲ್ಲಿ ಬುಧವಾರ ಡೆಂಘೀ ವಿರುದ್ಧದ ಜಾಗೃತಿ ರಥಕ್ಕೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಚಾಲನೆ ನೀಡಿದರು. ಡಿಎಚ್‌ಒ ಡಾ.ಆರ್.ರಂಗನಾಥ್,ಡಾ.ಎನ್.ಕಾಶಿ,ಡಾ.ಬಿ.ವಿ.ಗಿರೀಶ್,ಎನ್.ಎಸ್.ಮಂಜುನಾಥ್,ಬಿ.ಮೂಗಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net