ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ

16-kkr-1(9-23
Published on

ಕಿಕ್ಕೇರಿ: ನಮ್ಮ ಪರಿಸರ ಉಳಿಸುವುದು ಬಾಲ್ಯದಿಂದಲೇ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ರೋಹಿತ್ ಕಾನ್ವೆಂಟ್ ಮುಖ್ಯ ಶಿಕ್ಷಕಿ ತ್ರಿವೇಣಿ ತಿಳಿಸಿದರು.
ನಗರದ ರೋಹಿತ್ ಕಾನ್ವೆಂಟ್‌ನಲ್ಲಿ ಶಾಲಾ ಮಕ್ಕಳಿಗೆ ಇತ್ತಿಚೆಗೆ ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕಾ ತರಬೇತಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.


20 ವರ್ಷದಿಂದ ಶಾಲೆಯಲ್ಲಿ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಮಕ್ಕಳೇ ಕಲಾವಿದರ ಸಹಕಾರ ಪಡೆದುಕೊಂಡು ಖುಷಿಯಿಂದ ಮೂರ್ತಿ ತಯಾರಿಸುವುದರಿಂದ ಭವಿಷ್ಯದಲ್ಲಿ ಪರಿಸರ ಕಾಳಜಿ ಹೆಮ್ಮರವಾಗಿ ಮೂಡಲಿದೆ. ಪಿಒಪಿ ಗಣಪ ನೋಡಲು ಅಂದವಾದರೂ, ವಿಸರ್ಜನೆ ಮಾಡುವುದರಿಂದ ಕೆರೆ ನೀರು ಮಲೀನವಾಗಲಿದೆ. ಇದನ್ನು ಸೇವನೆ ಮಾಡುವ ಜಲಚರ ಪ್ರಾಣಿ, ಮನುಷ್ಯರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.


ಮಕ್ಕಳು ಕೆರೆಕಟ್ಟೆ ಶುಚಿತ್ವ ಕಾಪಾಡುವುದರಿಂದ ಪಾಲಕರಿಗೆ ಸುತ್ತಮುತ್ತಲ ಪ್ರದೇಶದ ಜನರಿಗೆ ಜಾಗೃತಿ ಮೂಡಿಸಿ ಪಿಒಪಿ ಗಣಪ ತ್ಯಜಿಸಿ, ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸಲು ಮನವರಿಕೆ ಮಾಡಿಕೊಡುವಂತೆ ಸಲಹೆ ನೀಡಿದರು.


ಕಲಾವಿದೆ ಕವಿತಾ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಮಣ್ಣಿನ ಗಣೇಶಮೂರ್ತಿ ತಯಾರಿಸಿ, ಸಂಭ್ರಮಪಟ್ಟರು. ಧೃತಿಕಾ, ಮನೋಜ್, ಪ್ರೀತಿ, ಶಾಂಭವಿ, ಮಹಾಲಕ್ಷ್ಮೀ, ಲಕ್ಷ್ಮೀ, ನಿಖಿತ್, ಅಕ್ಷಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net