ಪರಿಸರ ಹಾಳಾಗದಂತೆ ಗಣೇಶ ಹಬ್ಬ ಆಚರಿಸಿ

ydg02
Published on

ಯಾದಗಿರಿ: ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿದರೆ ಮನಸ್ಸಿಗೆ ನೆಮ್ಮದಿ ಲಭಿಸುವುದರ ಜತೆಗೆ ಪರಿಸರ ಕಾಪಾಡಿದಂತಾಗುತ್ತದೆ ಎಂದು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಅಭಿಪ್ರಾಯಪಟ್ಟರು.

ಇಲ್ಲಿನ ಹಳೇ ನಗರದ ಹಿಂದಿ ಪ್ರಚಾರ ಸಭಾ (ಹಳೆ ಬಿಸಿಎಂ ಹಾಸ್ಟಲï) ಆವರಣದಲ್ಲಿ ಗುರುವಾರ ವಿಜಯ ವಿಠಲ ಸೇವಾ ಸಂಸ್ಥೆ, ಶಶಿ ಚಾರಿಟೇಬಲï ಟ್ರಸ್ಟ್, ವೀರಶೈವ ಮಹಾಸಭಾ ಜಿ¯್ಲÁ ಯುವ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಪರಿಸರ ಸಂರP್ಷÀಣೆ ಪ್ರೇರಕ ಮಣ್ಣಿನ ಗಣಪತಿ ಮೂರ್ತಿ ಉಚಿತವಾಗಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಮಣ್ಣಿನಿಂದ ಮಾಡಿದ ಗಣೇಶನನ್ನೂ ಪೂಜೆಸಿದರೆ ಶ್ರೇಷ್ಠ ಎಂಬುದನ್ನು ತಿಳಿಸುವ ಉz್ದೆÃಶದಿಂದ ಈ ಬಗ್ಗೆ ಜನರಲ್ಲಿ ಜಾಗೃತಿಗಾಗಿ ೭೫೦ ಮಣ್ಣಿನ ಗಣೇಶ ಮೂರ್ತಿ ವಿತರಣೆ ಮಾಡುತ್ತಿರುವುದು ಮಹತ್ವದ ಕೆಲಸವಾಗಿದೆ ಎಂದು ಶ್ಲಾಘಿಸಿದರು.

ಸಿಪಿಐ ಸುನಿಲï ಮೂಲಿಮನಿ ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸುವುದು ಕೇವಲ ಸರ್ಕಾರದ ಕಾರ್ಯವಾಗಬಾರದು ಜನರೂ ಭಾಗಿಯಾಗಬೇಕು. ಈ ಕಾರ್ಯವನ್ನು ಈ ಸಂಸ್ಥೆಗಳು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ತನಾರತಿ ಸಂಸ್ಥೆ ಅಧ್ಯP್ಷÀ ಡಾ.ಸಿದ್ದರಾಜರಡ್ಡಿ ನಾಲ್ವಾರ ಮಾತನಾಡಿ, ದೇಶಾದ್ಯಂತ ಸುಮಾರು ೨೦ ಕೋಟಿ ಜನ ಪಿಒಪಿ ಗಣೇಶ ಮೂರ್ತಿ ಪೂಜಿಸುತ್ತಿz್ದÁರೆ ಇದು ಕಳವಳಕಾರಿ ಸಂಗತಿ. ಜನರಲ್ಲಿ ಜಾಗೃತಿ ಇಲ್ಲದಿರುವುದು ಮತ್ತು ಕೇವಲ ಲಾಭದ ದೃಷ್ಟಿಯಿಂದ ಮಾಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಹಂತ-ಹAತವಾಗಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಶಶಿ ಟ್ರಸ್ಟ್ ಅಧ್ಯP್ಷÀ ಮಲ್ಲಿಕಾರ್ಜುನ ಶಿರಗೋಳ ಮಾತನಾಡಿ, ಗಣೇಶೋತ್ಸವ ನಿಮಿತ್ತ ಉಚಿತವಾಗಿ ಪರಿಶುದ್ಧ ಜೇಡಿ ಮಣ್ಣಿನ ಗಣೇಶನ ಮೂರ್ತಿಗಳ ವಿತರಣೆ ಮಾಡಲಾಗುತ್ತಿದೆ. ಈಗ ಲಕ್ಷಿö್ಮÃ ನಗರವನ್ನು ಪಿಒಪಿ ಗಣೇಶ ಮುಕ್ತ ಮಾಡಲು ಮನೆ, ಮನೆಗೆ ಗಣೇಶ ವಿತರಣೆ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸುರೇಶ ಅಂಕಲಗಿ, ವಿಜಯ ವಿಠಲï ಸೇವಾ ಸಂಸ್ಥೆ ಅಧ್ಯP್ಷÀ ವಿಠಲï ಕುಲಕರ್ಣಿ, ಹಿಂದಿ ಪ್ರಚಾರ ಸಭಾದ ಅಧ್ಯP್ಷÀ ಪತಂಜಲಿ ಯೋಗ ಸಮಿತಿ ಜಿ¯್ಲÁ ಪ್ರಭಾರಿ ಅನಿಲï ಗುರೂಜಿ ಇದ್ದರು. ಮಾಳಪ್ಪ ಯಾದವ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net