ಪರಿಸರ ಸ್ನೇಹಿ ಮನೆ ನಿರ್ಮಾಣ ಅಗತ್ಯ

buld tech
ಬೀದರ್‌ನಲ್ಲಿ ಹಮ್ಮಿಕೊಂಡಿರುವ ಬಿಲ್ಡ್ ಟೆಕ್ ವಸ್ತು ಪ್ರದರ್ಶನ ವೀಕ್ಷಿಸಿದ ಬಳಿಕ ಸಚಿವ ಈಶ್ವರ ಖಂಡ್ರೆ ಮಾತನಾಡಿದರು. ಹಾವಶೆಟ್ಟಿ ಪಾಟೀಲ್, ಬಸವರಾಜ ಜಾಬಶೆಟ್ಟಿ, ಬಲಬೀರಸಿಂಗ್, ಉದಯಶೆಟ್ಟಿ, ನಜೀಬ್, ಶಿವಶಂಕರ ಕಾಮಶೆಟ್ಟಿ ಇತರರಿದ್ದರು.
Published on

ಬೀದರ್: ಕಡಿಮೆ ವೆಚ್ಚದ ದೀರ್ಘಾವಧಿ ಬಾಳಿಕೆ ಬರುವಂಥ ಸುರಕ್ಷಿತ ಹಾಗೂ ಪರಿಸರಸ್ನೇಹಿ ಮನೆಗಳ ನಿರ್ಮಾಣ ಇಂದಿನ ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಇಲ್ಲಿಯ ಕೇಂದ್ರ ಬಸ್ ನಿಲ್ದಾಣ ಸಮೀಪದ ಝೀರಾ ಫಂಕ್ಷನ್ ಹಾಲ್‌ನಲ್ಲಿ ನಡೆದಿರುವ ಬಿಲ್ಡ್ ಟೆಕ್-೨೦೨೫ ವಸ್ತು ಪ್ರದರ್ಶನಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಸುಸಜ್ಜಿತ ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ ಎಂದರು.

ಆಧುನಿಕ ತಂತ್ರಜ್ಞಾನ ಬಳಸಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮನೆ ಹೇಗೆ ನಿರ್ಮಿಸಬಹುದು? ಯಾವ ರೀತಿಯ ಸಾಮಗ್ರಿಗಳು ಚೆನ್ನಾಗಿರುತ್ತವೆ ಎಂಬ ಕುರಿತು ತಿಳಿಹೇಳಲು ಬಿಲ್ಡ್ ಟೆಕ್ ವಸ್ತು ಪ್ರದರ್ಶನ ಹಮ್ಮಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮನೆ ಕಟ್ಟಲು ಹಲವಾರು ಸಾಮಗ್ರಿಗಳ ಅಗತ್ಯವಿರುತ್ತದೆ. ದೇಶದ ಬೇರೆ ಬೇರೆ ಭಾಗದ ಕಂಪನಿಗಳ ವಿವಿಧ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರಿಂದ ಮನೆ ಕಟ್ಟಲು ಬಯಸುವವರಿಗೆ ಅನುಕೂಲವಾಗಿದೆ ಎಂದ ಅವರು, ಕ್ರೆಡಾಯ್ ಬೀದರ್, ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್ ಹಾಗೂ ಯು.ಎಸ್. ಕಮ್ಯುನಿಕೇಷನ್ಸ್​ ಸಹಯೋಗದಡಿ ಮುಂದಿನ ವರ್ಷವೂ ಇಂಥ ಪ್ರದರ್ಶನ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಹಾವಶೆಟ್ಟಿ ಪಾಟೀಲ್ ಮಾತನಾಡಿ, ಪ್ರದರ್ಶನ ಭಾನುವಾರವೂ ನಡೆಯಲಿದ್ದು, ಜಿಲ್ಲೆಯ ಜನರು ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಗುರುನಾನಕ ಶಿಕ್ಷಣ ಸಂಸ್ಥೆಗಳ ಸಮೂಹ ಅಧ್ಯಕ್ಷ ಬಲಬೀರಸಿಂಗ್, ಕ್ರೆಡಾಯ್ ಕರ್ನಾಟಕ ಉಪಾಧ್ಯಕ್ಷ ಉದಯಶೆಟ್ಟಿ, ಬೀದರ್ ಅಧ್ಯಕ್ಷ ರವಿ ಮೂಲಗೆ, ಕಲಬುರಗಿ ಮಾಜಿ ಅಧ್ಯಕ್ಷ ನಜೀಬ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ, ಯು.ಎಸ್. ಕಮ್ಯುನಿಕೇಷನ್ಸ್​ ಉಮಾಪತಿ, ಕಲ್ಮೇಶ್ ತೋಟದ ಇತರರಿದ್ದರು. ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪುರಸ್ಕೃತ ಪತ್ರಿಕಾ ಛಾಯಾಗ್ರಾಹಕ ಗೋಪಿಚಂದ ತಾಂದಳೆ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net