ಪರಿಸರ ಸಮತೋಲನ ರಕ್ಷಿಸುವ ವನ್ಯಜೀವಿ

HBD09
Published on

ಹುಮನಾಬಾದ್: ಪರಿಸರ ಸಮತೋಲನ ಕಾಪಾಡುವಲ್ಲಿ ವನ್ಯಜೀವಿಗಳ ಪಾತ್ರ ಮಹತ್ವದಾಗಿದೆ ಎಂದು ಪಿಎಸ್‌ಐ ಅಯ್ಯಪ್ಪ ಹೇಳಿದರು.

ಹಳ್ಳಿಖೇಡ (ಬಿ)ದ ಮಾತೋಶ್ರೀ ಕಸ್ತೂರಬಾಯಿ ತಾಳಂಪಳ್ಳಿ ಪ್ರೌಢ ಶಾಲೆಯಲ್ಲಿ ಅರಣ್ಯ ಇಲಾಖೆ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ೬೯ನೇ ವನ್ಯಜೀವಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ, ವನ್ಯಜೀವಿಗಳು ದೇಶದ ಸಂಪತ್ತು. ವನ್ಯಜೀವಿಗಳನ್ನು ಬೇಟೆ ಆಡುವುದು ಅಪರಾಧವಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದರು.

ಇಲಾಖೆ ಅಧಿಕಾರಿ ಸಂಜುಕುಮಾರ ಮಾತನಾಡಿ, ಸಾರ್ವಜನಿಕರಲ್ಲಿ ವನ್ಯಜೀವಿಗಳ ಮಹತ್ವ ಅರಿವು ಮೂಡಿಸುವುದೇ ಸಪ್ತಾಹದ ಮುಖ್ಯ ಉದ್ದೇಶ. ಅರಣ್ಯ ನಾಶದಿಂದ ವನ್ಯಜೀವಿಗಳಿಗೆ ತೊಂದರೆ ಆಗುತ್ತಿದೆ. ಅರಣ್ಯ ಸಂರಕ್ಷಣೆ ಎಲ್ಲರೂ ಆದ್ಯತೆ ನೀಡಬೇಕು ಎಂದರು.

ಪರಿಸರವಾದಿ ಶೈಲೇಂದ್ರ ಕಾವಡಿ ಮಾತನಾಡಿ, ಪರಿಸರ ಶುಚಿಗೊಳಿಸುವಲ್ಲಿ ರಣ ಹದ್ದುಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರ ಅಸಮತೋಲನದಿಂದ ರಣ ಹದ್ದುಗಳು ಕಣ್ಮರೆ ಆಗುತ್ತಿವೆ. ಅವುಗಳನ್ನು ಉಳಿಸುವುದಕ್ಕಾಗಿ ಅರಣ್ಯ ಇಲಾಖೆಯೂ ರಾಮನಗರದಲ್ಲಿ ಸಂರಕ್ಷಣ ತಾಣವನ್ನು ಘೋಷಿಸಿದೆ ಎಂದರು. ಸಂಸ್ಥೆ ಅಧ್ಯಕ್ಷೆ ಮಂಜುಳಾ ಗಂಗಾ, ಸುಭಾಷ ಗಂಗಾ, ಗುಂಡೇರಾವ, ಮಾಳಪ್ಪ, ಸದಾನಂದ, ಮುಖ್ಯ ಶಿಕ್ಷಕ ಮಾಣಿಕ ರೆಡ್ಡಿ, ದತ್ತಾತ್ರೇಯ ಪಂಚಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net