ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡಿ

Good will public School photo-1
Published on

ಬೀದರ್: ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡಬೇಕು ಎಂದು ಪ್ರಾಚಾರ್ಯೆ ಪ್ರೇಮಕುಮಾರಿ ತಲವಾಡಕರ್ ಹೇಳಿದರು.
ನಗರದ ಮಡಿವಾಳ ವೃತ್ತ ಸಮೀಪದ ಗುಡ್‍ವಿಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಗುರು ಪೂರ್ಣಿಮೆ ಹಾಗೂ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಕೃತಿ ಮಾನವನಿಗೆ ಎಲ್ಲವನ್ನೂ ಕೊಟ್ಟಿದೆ. ಹೀಗಾಗಿ ಅದನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಉಸಿರಾಟಕ್ಕೆ ಶುದ್ಧ ಗಾಳಿ, ಸಕಾಲಕ್ಕೆ ಮಳೆಗಾಗಿ ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು, ಬೆಳೆಸಬೇಕಾಗಿದೆ ಎಂದರು.
ಶಾಲೆ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಸಾಧನಾ ಕಾಶೀನಾಥ, ಶಿಕ್ಷಕಿಯರಾದ ಅಂಜಿಮ್ ಕೌಸರ್, ಜಯಶ್ರೀ ನೆಲವಾಡೆ, ಯಶೋದಾ ಶರ್ಮಾ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net