ಪರಿಸರ ಸಂರಕ್ಷಣೆಗೆ ಮುಂದಾಗೋಣ

23 HKR 03
Published on

ಹಿರೇಕೆರೂರ: ಪರಿಸರ ನಾಶವಾದರೆ ಭೂಮಿಗೆ ಗಂಡಾಂತರ ತಪ್ಪಿದ್ದಲ್ಲ. ಈ ಬಗ್ಗೆ ಎಲ್ಲರೂ ತಿಳಿದುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಶಿಕ್ಷಕ ಎಸ್.ಪಿ. ಮುಗುಳಶೆಟ್ಟಿ ಹೇಳಿದರು.

ತಾಲೂಕಿನ ಚಿಕ್ಕೇರೂರು ವಲಯದ ಯತ್ತಿನಹಳ್ಳಿ ಎಂ.ಕೆ., ಗ್ರಾಮದ ಮಾರುತಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಪರಿಸರ ನಾಶವಾದರೆ ಆಗುವ ಸಮಸ್ಯೆಗಳು ಮತ್ತು ಪರಿಸರ ಮಹತ್ವದ ಬಗ್ಗೆ ತಿಳಿಸಿ, ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಪರಿಸರವಾದಿಗಳು ಸಮಾಜಕ್ಕೆ ನೀಡಿದ ಕೊಡುಗೆ ಬಗ್ಗೆ ತಿಳಿಸಿದರು.

ಕೃಷಿ ಮೇಲ್ವಿಚಾರಕ ಧರ್ಮಪ್ಪ ಜೋಗೇರ ಮಾತನಾಡಿ, ಪರಿಸರ ವಿನಾಶದಿಂದ ಆಗುತ್ತಿರುವ ವಿಕೋಪಗಳು ಹಾಗೂ ಕೃಷಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಚಿಕ್ಕೇರೂರು ವಲಯ ಮೇಲ್ವಿಚಾರಕ ಅಶೋಕ ಎಂ.ಪಿ., ಒಕ್ಕೂಟದ ಅಧ್ಯಕ್ಷೆ ಸುಮಾ ಮುಚುಡಿ, ರೇಣುಕಾ ಮಲ್ಲಶೆಟ್ಟಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಸೇವಾ ಪ್ರತಿನಿಧಿ ನಂದಾ ಎಂ., ವಿದ್ಯಾ.ಕೆ., ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net