ಪರಿಸರ ಸಂರಕ್ಷಣೆಗೆ ಪ್ರಥಮಾಧ್ಯತೆ ನೀಡಿ

IMG-20220118-WA0037 copy
Published on

ಯಾದಗಿರಿ: ನಾಗರಿಕ ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಪ್ರಥಮಾಧ್ಯತೆ ನೀಡಬೇಕು ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಸಲಹೆ ನೀಡಿದರು.

ನಗರದ ಸುಭಾಷ್ ವೃತ್ತದಿಂದ ಶಾಸ್ತ್ರೀ ವೃತ್ತದವರೆಗೆ ಪೊಲೀಸ್ ಇಲಾಖೆ ಮತ್ತು ಯುವಾ ಬ್ರಿಗೇಡ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಗರ ಸುಂದರವಾಗಿ ಕಾಣಲು ಗಿಡಮರಗಳ ಅವಶ್ಯಕತೆ ಹೆಚ್ಚಾಗಿದೆ. ಮರ ಬೆಳೆಸುವುದರಿಂದ ಭವಿಷ್ಯದಲ್ಲಿ ಆಮ್ಲಜನಕದ ಸಮಸ್ಯೆಯಾಗುವುದಿಲ್ಲ. ಶುದ್ಧ ಗಾಳಿಯ ಅವಶ್ಯತೆ ಎಷ್ಟಿದೆ ಎಂಬ ಬಗ್ಗೆ ಕೋವಿಡ್ ಸಂದರ್ಭದಲ್ಲಿ ನಮಗೆ ಅರಿವಿಗೆ ಬಂದಿದೆ ಎಂದು ಹೇಳಿದರು.

ಯುವ ಜನಾಂಗ ಇಂಥ ಸಮಾಜಮುಖಿ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ. ಕೇವಲ ಮೊಬೈಲ್, ಇಂಟರ್ನೆಟ್ನಲ್ಲಿ ಕಾಲಹರಣ ಮಾಡದೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಯುವ ಬ್ರಿಗೇಡ್ ಕಾರ್ಯ ಶ್ಲಾಘನೀಯ ಎಂದರು.

ಶಾಸಕ ವೆಂಕಟರಡ್ಡಿ ಮುದ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಶಶಿ ಸೂಪರ್ ಬಜಾರ್ನ ಮಲ್ಲಿಕಾರ್ಜುನ ಶಿರಗೋಳ, ಸಂಗಮೇಶ ಕೆಂಭಾವಿ, ಶರಣಪ್ಪ, ವಿಠ್ಠಲ, ಅಂಬರೀಶ, ಸಂತೋಷ, ಶಶಾಂಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net