

ಚಿತ್ರದುರ್ಗ: ವಿದ್ಯಾರ್ಥಿಗಳು ಅಧ್ಯಯನದ ಜತೆಗೆ ಪರಿಸರ ಕಾಳಜಿ ವಹಿಸಬೇಕೆಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು. ನಗರದ ಕ್ರೀಡಾ ಭವನದಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿ ಗೆ ಬಹುಮಾನ ವಿತರಣೆ ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಿದಾಗ ಭವಿಷ್ಯದಲ್ಲಿ ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳು ಜಾಗೃತರಾಗುವುದರೊಂದಿಗೆ ತಮ್ಮ ಕುಟುಂಬ,ನೆರೆಹೊರೆಯವರಲ್ಲೂ ಅ ರಿವು ಮೂಡಿಸ ಬೇಕು. ಮನೆಯಿಂದಲೇ ಪರಿಸರ ಜಾಗೃತಿ ಮೂಡಬೇಕು. ನಮ್ಮ ಮನೆ,ನಮ್ಮ ಮನಸ್ಸು ಸ್ವಚ್ಛವಾಗಿದ್ದರೆ ಪರಿಸರವೂ ಸ್ವಚ್ಛ ವಾಗಿರುತ್ತದೆ. ಪಠ್ಯ,ಅಂಕಪಟ್ಟಿ ಹೊರತಾಗಿ,ಉತ್ತಮ ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕೌಶಲಾಧರಿತ ಶಿಕ್ಷಣವನ್ನೂ ಪಡೆಯ ಬೇಕೆಂದ ರು.
ವಲಯ ಅರಣ್ಯಾಧಿಕಾರಿ ಉಷಾರಾಣಿ ಮಾತನಾಡಿ,ಅರಣ್ಯಇಲಾಖೆಯಿಂದ ಸಸಿ ವಿತರಿಸಲಾಗುತ್ತದೆ. ಪರಿಸರ ಸಂರಕ್ಷಣೆ ನಿರಂತರ ಕೆಲಸವಾಗಬೇಕೆಂದರು. ನಗರಸಭೆ ಆಯುಕ್ತೆ ಎಂ.ರೇಣುಕಾ ಮಾತನಾಡಿ,ಪ್ರತಿಯೊಬ್ಬರು ಪರಿಸರಸ್ನೇಹಿ ಜೀವನ ನಡೆಸಬೇಕು. ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್ ಬಳಸಬೇಕೆಂದರು. ಚಿತ್ರದುರ್ಗ ಬಿಇಒ ಎಸ್.ನಾಗಭೂಷಣ್, ಪರಿಸರ ಅಧಿಕಾರಿ ಇ.ಪ್ರಕಾಶ್ ಮಾತನಾಡಿದರು. ಉಪ ಪರಿಸರ ಅಧಿಕಾರಿ ರಾಜೇಶ್ ಇದ್ದರು.
ವಿಶ್ವ ಪರಿಸರ ದಿನಾಚರಣೆ ಘೋಷವಾಕ್ಯ ಭೂ ಮರು ಸ್ಥಾಪನೆ,ಮರು ಭೂಮಿಕರಣ ಹಾಗೂ ಬರ ತಡೆಯುವಿಕೆ ನಮ್ಮ ಭೂಮಿ ನ ಮ್ಮ ಭವಿಷ್ಯ ಸಂಬಂಧಿಸಿದಂತೆ ಚಿತ್ರದುರ್ಗ ನಗರ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಮತ್ತು ಪ್ರಬಂಧ ಸ್ಪರ್ಧೆಯನ್ನು ಜೂನ್ 7ರಂದು ಏರ್ಪಡಿಸಲಾಗಿತ್ತು.
ಚಿತ್ರಕಲೆ ಸ್ಪರ್ಧೆ
8ನೇ ತರಗತಿ-ಡಾನ್‌ಬಾಸ್ಕೋ ಶಾಲೆಯ ರಿದಾಷರೀಪ್(ಪ್ರ),ವಿದ್ಯಾವಿಕಾಸ ಶಾಲೆ ಹರ್ಷಿತ್ ಎನ್ ಬೇದ್ರೆ (ದ್ವಿ)ಎಸ್‌ಜೆಎಂ ಸಿಬಿ ಎಸ್‌ಇ ಶಾಲೆ ಸಿ.ಅನ್ವಿತಾ(ತೃ)ವಾಸವಿ ವಿದ್ಯಾ ಸಂಸ್ಥೆಯ ಎಸ್.ವಿನೀತ್‌ಚಂದ್ರ(ನಾಲ್ಕನೇ).
9ನೇ ತರಗತಿ-ವಿದ್ಯಾವಿಕಾಸ ವಿದ್ಯಾಸಂಸ್ಥೆ ಎಸ್.ಕೆ.ಸಂಪ್ರತಾ(ಪ್ರ),ಕೆ.ಕೆ.ನ್ಯಾಷನಲ್ ಶಾಲೆ ಎ.ಪವನ್(ದ್ವಿ)ಅನುಪಮ ಇಂಟರ್ ನ್ಯಾಷನಲ್ ಶಾಲೆ ಎಂ.ದೇವರಾಜ್(ತೃ)ಎಸ್‌ಜೆಎಂ ಆಂಗ್ಲ ಮಾಧ್ಯಮ ಶಾಲೆಯ ಟಿ.ತೃಪ್ತಿ(ನಾಲ್ಕನೇ).
10ನೇ ತರಗತಿ-ಎಸ್‌ಜೆಎಂ ಸಿಬಿಎಎಸ್‌ಇ ಶಾಲೆ ಸಿ.ಜೀವಿತಾ (ಪ್ರ),ಸಿ.ಭಾರತಿ(ದ್ವಿ),ವಿದ್ಯಾವಿಕಾಸ ವಿದ್ಯಾಸಂಸ್ಥೆ ರಾಮ್‌ಚರಣ್(ತೃ) ಜ್ಞಾನ ಭಾರತಿ ಶಾಲೆ ಎಂ ಶೋಭಾ(ನಾಲ್ಕನೇ).
ಪ್ರಬಂಧ ಸ್ಪರ್ಧೆ
8ನೇ ತರಗತಿ-ಎಸ್‌ಜೆಎಂ ಆಂಗ್ಲ ಮಾಧ್ಯಮ ಶಾಲೆಯ ಟಿ.ಮೌಲ್ಯಶ್ರೀ(ಪ್ರ),ಶ್ರೀ ವಾಸವಿ ಕನ್ನಡ ಮಾಧ್ಯಮ ಶಾಲೆ ಆರ್.ಬೃಂದಾ (ದ್ವೀ),ಕೆ.ಕೆ.ನ್ಯಾಷನಲ್ ಶಾಲೆ ಎಂ.ಶುಭಶ್ರೀ (ತೃ)ವಿದ್ಯಾವಿಕಾಸ ವಿದ್ಯಾಸಂಸ್ಥೆ ಬಿ.ವಿ.ಬಿಂದು (ನಾಲ್ಕನೇ).
9ನೇ ತರಗತಿ- ಸಂಪಿಗೆ ಸಿದ್ದೇಶ್ವರ ಶಾಲೆ ಯಶಸ್ವಿನಿ(ಪ್ರ),ಕೆ.ಕೆ.ನ್ಯಾಷನಲ್ ಶಾಲೆ ಮದಿಹ ಫಾತಿಮಾ (ದ್ವೀ),ಎಸ್‌ಜೆಎಂ ಸಿಬಿಎಸ್‌ಇ ಶಾಲೆ ಸಿ.ಎಸ್.ಹಿತಾಶ್ರೀ(ತೃ)ಅನುಮಪ ಇಂಟರ್ ನ್ಯಾಷನಲ್ ಶಾಲೆ ಸಿ.ರುಕ್ಮೀಣಿ (ನಾಲ್ಕನೇ).
10ನೇ ತರಗತಿ-ವಿದ್ಯಾವಿಕಾಸ ವಿದ್ಯಾಸಂಸ್ಥೆ ವಿ.ಜಾನವಿ(ಪ್ರ),ಎಸ್‌ಜೆಎಂ ಸಿಬಿಎಸ್‌ಇ ಶಾಲೆ ಎ.ಎಂ.ಸುಖಿತಾ(ದ್ವಿ),ಕೆ.ಕೆ.ನ್ಯಾಷನಲ್ ಶಾಲೆ ಎ.ಉಮೇಸ್ನಾ(ತೃ),ಬೃಹನ್ಮಠ ಶಾಲೆಯ ಪಿ.ಸಿ.ಬಿಂದು(ನಾಲ್ಕನೇ).