

ಚಿತ್ರದುರ್ಗ: ಪರಿಸರ ಸಂರಕ್ಷಣೆಯಿಂದ ಸಕಲ ಜೀವಿಗಳ ರಕ್ಷಣೆ ಸಾಧ್ಯವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೂಳಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಚಿತ್ರ ಡಾನ್ ಬೊಸ್ಕೊ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಬೇಕು. ಪರಿಸರವನ್ನು ಸಂರಕ್ಷಿಸಿದರೆ ನಮ್ಮ ಪೀಳಿಗೆಯನ್ನು ರಕ್ಷಿಸುತ್ತದೆ ಎಂದರು.
ನ್ಯಾಯಾಧೀಶರಾದ ಕೆಂಪರಾಜು, ಎಂ.ವಿಜಯ್, ಎ.ಎಂ.ಚೈತ್ರಾ, ಕೆ.ಬಿ.ಗೀತಾ ಕುಂಬಾರ, ನೇಮಿಚಂದ್ರ, ಎಸ್. ಅನಿತಾ ಕುಮಾರಿ,ಸಹನಾ,ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ.ಶಿವಯಾದವ್, ಉಪಾಧ್ಯಕ್ಷ ಜಿ.ಸಿ.ದಯಾನಂದ, ಕಾರ‌್ಯದರ್ಶಿ ಎಂ. ಮೂರ್ತಿ, ಎಸಿಎಫ್ ಸುರೇಶ್, ವಲಯ ಅರಣ್ಯಾಧಿಕಾರಿ ಎಚ್.ಉಷಾರಾಣಿ, ಪ್ರಾಂಶುಪಾಲ ಡಾ.ಕೆ.ಜೆ.ಜೋಮನ್, ಫಾದರ್ ಸಜ್ಜಿ ಜಾರ್ಜ್, ಫಾದರ್ ಸಬಾಸ್ಟಿನ್, ಫಾದರ್ ಬೆನ್ನಿ, ಡಾ.ಎನ್.ಧನಕೋಟಿ, ಫಾದರ್ ಸ್ಟೀಫನ್ ಲಾರೆನ್ಸ್ ಮತ್ತಿತರರು ಇದ್ದರು.