ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

FEB 09-HRP-01,
Published on

ಹರಪನಹಳ್ಳಿ: ನಗರಗಳ ಬೆಳವಣಿಗೆಯಿಂದ ವಾಯುಮಾಲಿನ್ಯ ಹೆಚ್ಚಾಗಿ ವಾತಾವರಣ ಕಲುಷಿತವಾಗುತ್ತಿದೆ ಎಂದು ಸಹಾಯಕ ವಲಯ ಅರಣ್ಯಾಧಿಕಾರಿ ವೀರೇಶ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಶನಿವಾರ ಮತನಾಡಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ವಾಹನಗಳ ಹೆಚ್ಚಳದಿಂದ ಕಲುಷಿತ ಗಾಳಿ ವಾತಾವರಣದಲ್ಲಿ ಸೇರಿ ಪರಿಸರ ದಿನೇ ದಿನೆ ಹಾಳಾಗುತ್ತಿದೆ ಎಂದರು.

ವಿಜ್ಞಾನ ಶಿಕ್ಷಕ ಬಾರಿಕರ ಜಯಮಾಲತೇಶ್ ಮಾತನಾಡಿ. ಶುದ್ದ ಗಾಳಿ ಸಿಗಬೇಕಾದರೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಶುಚಿತ್ವದಿಂದ ಇಟ್ಟುಕೊಳ್ಳಬೇಕು. ಪರಿಸರ ನಾಶ ಮತ್ತು ಮಾಲಿನ್ಯ ಈಚೆಗೆ ವಿವಿಧ ಕಾರಣಗಳಿಂದ ಹೆಚ್ಚುತ್ತಿದೆ. ಜೀವ ಸಂಕುಲದ ಅಳಿವು, ಉಳಿವು ನಿರ್ಧರಿಸುವ ಕುರಿತು ಕಾಳಜಿ ಬೆಳೆಸಿಕೊಳ್ಳುವುದು ಅವಶ್ಯವಾಗಿದೆ ಎಂದರು.

ಕೈಗಾರಿಕೆ, ಗಣಿಗಾರಿಕೆ ಮತ್ತು ನಗರೀಕರಣದ ಪ್ರಭಾವದಿಂದ ಪರಿಸರ ವಿನಾಶ ಹೆಚ್ಚಿದೆ. ಮುಂದಿನ ಜನಾಂಗದ ಉಳಿವಿಗಾಗಿ ಸುಂದರ ಪ್ರಕೃತಿ ಸಂಪತ್ತು ಉಳಿಸಿ ಬೆಳೆಸುವುದು ಅಗತ್ಯ. ಜಾಗತಿಕ ಮಟ್ಟದಲ್ಲಿ ಅತಿ ವೇಗವಾಗಿ ಬೆಳೆಯಬೇಕು ಎನ್ನುವ ಹಂಬಲದಿಂದ ಹಲವಾರು ದೇಶಗಳು ಬೃಹತ್ ಕಾರ್ಖಾನೆಗಳನ್ನು ಸ್ಥಾಪಿಸಿವೆ. ಕೈಗಾರಿಕೆಗಳ ದಟ್ಟ ಹೊಗೆ ಮಾನವನ ದೇಹದಲ್ಲಿ ಹರಡಿ ಕ್ರಮೇಣ ಆಯುಷ್ಯ ಕಡಿಮೆಯಾಗುತ್ತದೆ ಎಂದು ಬಾರಿಕರ ಜಯಮಾಲತೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net