ಪರಿಸರ ಸಂರಕ್ಷಣೆ ಎಲ್ಲರ ಹೊಣೆ - ಎಸ್ಪಿ ಉಮಾ ಪ್ರಶಾಂತ್ ಹೇಳಿಕೆ

IMG-20230902-WA0004.jpg
Published on

ದಾವಣಗೆರೆ: ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು. ರೋಟರಿ ಕ್ಲಬ್ ದಾವಣಗೆರೆ, ಇನ್ನರ್ ವ್ಹೀಲ್ ಕ್ಲಬ್, ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ನಗರದ ಪೊಲೀಸ್ ಕ್ವಾರ್ಟರ್ಸ್ ಅಂಗಳದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಸ್ಯಪಾಲನೆ ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಸಸಿ ನೆಟ್ಟು ಪೋಷಣೆ ಮಾಡಿದರೆ ಪರಿಸರಕ್ಕೆ ನಾವು ಮಾಡುವ ಉಪಕಾರ ಆಗಲಿದೆ ಎಂದು ಹೇಳಿದರು. ಸುಮಾರು 50 ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ರೋಟರಿ- ಇನ್ನರ್ ವ್ಹೀಲ್ ಕ್ಲಬ್ ನ ಕುಸುಮಾ ವಿಜಯಾನಂದ್, ಸುನೀತಾ ಮೃತುಂಜಯ,ಆಶಾ ಜಗದೀಶ್ ಬೇತೂರ್,

ಡಾ. ಚೈತಾಲಿ, ಅಂದನೂರು ಆನಂದಕುಮಾರ್, ಎಸ್ ಕೆ ವೀರಣ್ಣ, ಆರ್.ಎಸ್.ವಿಜಯಾನಂದ್, ಆರ್.ಟಿ. ಮೃತ್ಯುಂಜಯ, ಜಗದೀಶ್ ಬೇತೂರ್ , ದಿನೇಶ್ ಶೆಟ್ಟಿ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net