ಪರಿಸರ ರಕ್ಷಣೆಯಿಂದ ಮನುಕುಲಕ್ಕೆ ಒಳಿತು

,_1(90)
Published on

ಗೌರಿಬಿದನೂರು : ಗಿಡ ನೆಟ್ಟು ಪೋಷಿಸಿ ಸಂರಕ್ಷಣೆ ಮಾಡಿದಲ್ಲಿ ಅವುಗಳು ಭವಿಷ್ಯದಲ್ಲಿ ಮನುಕುಲದ ಒಳಿತಿಗೆ ಸಹಕಾರಿಯಾಗಲಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಎನ್.ಮುನಿರಾಜು ತಿಳಿಸಿದರು.

ತಾಲೂಕು ಹಾಲಗಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನ ಗಾಂಧಿನಗರ ಗಿಡ ನೆಡಲು ಚಾಲನೆ ನೀಡಿ ಮಾತನಾಡಿದರು.

ನರೇಗಾ ಯೋಜನೆಯಲ್ಲಿ ಕೂಲಿಕಾರ್ಮಿಕರನ್ನು ಬಳಸಿಕೊಂಡು ಶಾಲಾವರಣ, ಸರ್ಕಾರಿ ಭೂಮಿ, ಸ್ಮಶಾನ, ಕೆರೆಯಂಗಳ ಸೇರಿ ಇನ್ನಿತರ ಪ್ರದೇಶದಲ್ಲಿ ಗಿಡಗಳನ್ನು ನೆಡುವುದರಿಂದ ಜೀವಸಂಕುಲಕ್ಕೆ ಆಸರೆಯಾದಂತಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಇದು ಪರಿಹಾರವಾಗಲಿದೆ ಎಂದರು.

ಗಿಡಮರಗಳನ್ನು ನಾಟಿ ಮಾಡಿ ಪೋಷಿಸುವುದರಿಂದ ಮಳೆ ಪ್ರಮಾಣ ಹೆಚ್ಚಾಗಲಿದೆ. ಇದರಿಂದ ನೀರಿನ ಸಂರಕ್ಷಣೆಯಾಗಿ ರೈತಾಪಿ ವರ್ಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಎಚ್.ಎನ್.ಪ್ರಕಾಶರೆಡ್ಡಿ ತಿಳಿಸಿದರು.ತಾಪಂ ಉಪಾಧ್ಯಕ್ಷೆ ರತ್ನಮ್ಮ, ನರೇಗಾ ಎಡಿ ಪಿ.ಚಿನ್ನಪ್ಪ, ಪಿಡಿಒ ಶ್ರೀನಿವಾಸ, ಮುಖಂಡರಾದ ಬಾಬುರೆಡ್ಡಿ, ತಿಮ್ಮಾರೆಡ್ಡಿ, ಗ್ರಾಪಂ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net